ಚಳ್ಳಕೆರೆ : ನಗರದಲ್ಲಿ ಸಾರ್ವಜನಿಕರ ಹೋಡಾಟಕ್ಕೆ ಸಂಚಕಾರ ತರುವ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳು ದಿನ ನಿತ್ಯವೂ ಶಾಲಾ ಮಕ್ಕಳಿಂದ ವಯೋವೃದ್ದರವರೆಗೆ ಹಾಗೂ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ತಲೆನೋವು ತರಿಸಿವೆ.
ಇನ್ನೂ ದಿನ ಬೆಳಗಾದರೆ ರಸ್ತೆಯ ಮೇಲೆ ಮಲಗುವ ಬಿಡಾಡಿ ದನಗಳಿಂದ ರೋಸಿಹೋದ ವಾಹನ ಸಾವರಾರ ಪಾಡಂತು ಹೇಳತೀರದು,
ಇನ್ನೂ ನಗರದ ಕೆಎಸ್‌ಆರ್‌ಟಿ ಸಾರಿಗೆ ನಿಲ್ದಾಣದಲ್ಲಿ ಗೂಳಿಯೊಂದು ಪ್ರಯಾಣಿಕರ ತಂಗುದಾಣಕ್ಕೆ ಆಗಮಿಸಿ ದಾದಂಲೆ ನಡೆಸಿದೆ. ಗೂಳಿ ನೋಡಿದ ಪ್ರಯಾಣಿಕರು ಗಾಬರಿಗೊಂಡು ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತವಾರಣ ಸೃಷ್ಠಿಯಾಗಿತ್ತು.