ಚಳ್ಳಕೆರೆ ನಗರದ ಹೊರ ವಲಯದಲ್ಲಿ ನಡೆಯುತ್ತಿರುವ ಗುಂಪು ಮನೆ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ
ವೀಕ್ಷಿಸಿದರು.
ಇನ್ನೂ ನಗರಸಭೆಯ ವತಿಯಿಂದ ಗುಂಪು ಮನೆ ಯೋಜನೆಯಡಿ ರವೀಂದ್ರ ಗುತ್ತಿಗೆದಾರರಿಂದ ನಿರ್ಮಿಸಲಾಗುತ್ತಿರುವ ಮನೆಗಳ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಸಂಭಂದ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ರಾದ ಚಂದ್ರಪ್ಪ, ಪ್ರಾಜೆಕ್ಟ್ ಡೈರೆಕ್ಟರ್ ಲಕ್ಷ್ಮೀಕಾಂತ್, ಇಂಜಿನಿಯರ್ ಗಣೇಶ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಸದಸ್ಯರಾದ ಸುಮಾ ಭರಮಯ್ಯ, ಕವಿತಾ ಬೋರಯ್ಯ, ಸುಜಾತ ಪ್ರಹ್ಲಾದ್, ಜೈ ತುಂಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ನಕುಮಾರ್, ಮುಖಂಡರುಗಳಾದ ದೇವರಾಜ್, ಸೈಯದ್, ಕೃಷ್ಣಮೂರ್ತಿ, ಷಣ್ಮುಖಪ್ಪ, ಚೇತನ್ ಕುಮಾರ್, ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.