ಚಳ್ಳಕೆರೆ : “ದ.ಸಂ.ಸ. ಸುವರ್ಣ ಮಹೋತ್ಸವ ಸಂಭ್ರಮ” ಅಂಗವಾಗಿ ಚಳ್ಳಕೆರೆ ನಗರದ ಮೈರಾಡ ಕಾಲೋನಿಯ ನೂತನ ಶಾಖೆ ಉದ್ಘಾಟನಾ ಸಮಾರಂಭ ಫೆ.2 ನೇ ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ. ಶ್ರೀ ಮಾರಮ್ಮದೇವಿ ದೇವಸ್ಥಾನ ಹತ್ತಿರ ಮೈರಾಡ ಕಾಲೋನಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ನೂತನ ಮೈರಾಡ ಕಾಲೋನಿ ನಗರ ಶಾಖೆ ಸಂಚಾಲಕರಾದ ಹೆಚ್.ಮಹೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಅದರಂತೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಹೆಚ್.ಆಂಜನೇಯ ನಾಮಫಲಕ ಉದ್ಘಾಟಿಸುವರು ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ಟಿ.ವಿಜಯ್ ಕುಮಾರ್ ವಹಿಸುವರು ಉದ್ಘಟನೆಯನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ನೆರೆವೆರಿಸುವರು, ಇನ್ನೂ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಹೊನ್ನುರಸ್ವಾಮಿ, ರಾಜಶೇಖರ್, ನಾಗರಾಜ್, ಈರಣ್ಣ, ವೆಂಕಟೇಶ್, ಏಕಾಂತಪ್ಪ, ವೆಂಕಟೇಶ್,ಮಹAತೇಶ್, ನಾಗರಾಜಪ್ಪ, ಚೌಡೇಶ್, ವೆಂಕಟೇಶ್, ಮಹಾಂತೇಶ್, ತಿಪ್ಪೆಸ್ವಾಮಿ, ಮಲ್ಲಮ್ಮ, ತಿಪ್ಪಕ್ಕ, ಪಾರ್ವತಮ್ಮ, ಅನ್ನಪೂರ್ಣಮ್ಮ, ಗೀತಮ್ಮ, ರಾಜೇಶ್ವರಿ ಇತರ ಮುಖಂಡರು ಭಾಗವಹಿಸುವರು ಎನ್ನಲಾಗಿದೆ.

ಕರ್ನಾಟಕದಲ್ಲಿ ಧ್ವನಿ” ಇಲ್ಲದವರ ಧ್ವನಿಯಾಗಿ ಸಮ ಸಮಾಜದ ಕನಸನ್ನು ಹೊತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಹೋರಾಟದ ರಥವನ್ನು ಮುನ್ನಡೆಸಲು ಕರ್ನಾಟಕದ ಅಂಬೇಡ್ಕರ್ ಎಂದೇ ಹೆಸರುವಾಸಿಯಾದ ಪ್ರೋ! ಅ.ಕೃಷ್ಣಪ್ಪನವರ ನೇತೃತ್ವದಲ್ಲಿ ಹಲವು ಮಹನೀಯರ ಸಹಕಾರದಿಂದ 1974ರಲ್ಲಿ ಹುಟ್ಟಿಕೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಜಾತಿವಾದಿ, ಬಂಡವಾಳಶಾಹಿ, ಆಡಳಿತಶಾಹಿ, ಪ್ರಭುತ್ವದ ಅಮಾನವೀಯ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ಸಂಘರ್ಷಮಯ ಹೋರಾಟ ರೂಪಿಸಿ ಶೋಷಿತರಿಗೆ ನೈತಿಕ ಶಕ್ತಿಯಾಗಿರುವುದು ಸ್ಪಷ್ಟವಾಗಿದೆ ಎಂಬುದಾಗಿದೆ.

About The Author

Namma Challakere Local News
error: Content is protected !!