ಚಳ್ಳಕೆರೆ : ಶರಣ ಶ್ರೀ ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರ ಜೊತೆ ಬೆಳೆದಂಥ ಮಹಾನ್ ಪುರುಷ ಮಾಚಿ ಪ್ರಭು ಶ್ರೀಗಳು ಎಂದು ತಾಲೂಕು ದಂಡಾಧಿಕಾರಿ ರೆಹಾನ್ ಪಾಷಾ ಹೇಳಿದರು,
ಇವರು ನಗರದ ತಾಲೂಕು ಆಡಳಿತ ಹಾಗೂ ಶ್ರೀ ಮಾಚಿ ಪ್ರಭು ಸಮುದಾಯದವರ ಸಂಯುಕ್ತ ಆಶಯದಲ್ಲಿ ಆಯೋಜಿಸಿದ ಕಾರ್ಯಕ್ರಮ ಒಂದರಲ್ಲಿ ಶ್ರೀ ಮಾಜಿ ಪ್ರಭು ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಇವರು,
ಮಹಾನ್ ಶರಣ ವಚನಕಾರ ಮಾಚಿ ಪ್ರಭು ಶ್ರೀಗಳು 11 ರಿಂದ 12ನೇ ಶತಮಾನದಲ್ಲಿ ಬಿಜಾಪುರ ಜಿಲ್ಲೆಯ ದೇವರ ಉಪ್ಪರಗಿ ಎಂಬ ಗ್ರಾಮದಲ್ಲಿ ಜನಿಸಿ ಹುಟ್ಟಿನಿಂದಲೇ ದೈವ ಸಂಭೂತರಾಗಿ ಶಿವನ ಆರಾಧನೆಗೆ ಪಾತ್ರ ಆದಂತವರು ನಂತರ ಇವರು ಕಾಲಕ್ರಮೇಣ ಮಹಾನ್ ಶರಣ ಬಸವಣ್ಣನವರ ಅನುಭವ ಮಂಟಪಕ್ಕೆ ಬಂದು ನಿಷ್ಠ ಭಕ್ತಿಯಿಂದ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಇನ್ನು ಈ ಸಂದರ್ಭದಲ್ಲಿ ಮಾಜಿ ಪ್ರಭು ಸಮುದಾಯದ ಅಧ್ಯಕ್ಷ ನಾಗರಾಜ್ ಮಾತನಾಡಿ, ನಮ್ಮ ಸಮುದಾಯವು ಅಲ್ಪಸಂಖ್ಯಾತ ಸಮುದಾಯ ವಾಗಿದ್ದು, ನಮ್ಮಂತ ಸಮಾಜವನ್ನು ಸರ್ಕಾರ ಗುರುತಿಸದೆ ಮೀನ ಮೇಷ ಮಾಡುತ್ತಿದೆ ,ಅಲ್ಲದೆ ನಮ್ಮ ಸಮುದಾಯವನ್ನು S E ಪಟ್ಟಿಗೆ ಸೇರಿಸಲು ಈ ಹಿಂದೆ ಹೋರಾಟ ಮಾಡಿದ್ದೇವೆ, ಆದರೂ ಕೂಡ ನಮ್ಮ ಸಮುದಾಯದಲ್ಲಿ ಸಂಘಟನೆ ಕೊರತೆ ಇರುವುದರಿಂದ ನಾವೆಲ್ಲ ಅವಕಾಶ ವಂಚಿತರಾಗಿದ್ದೇವೆ ,ಇನ್ನಾದರೂ ನಮ್ಮ ಸಮುದಾಯದ ಮುಖಂಡರುಗಳು ಮುಂದಿನ ದಿನಗಳಲ್ಲಿ ಮಾಜಿ ಪ್ರಭು ಸಮುದಾಯ ಸಂಘಟನೆಗಳು ರಾಜ್ಯ ರಾಜಕೀಯಕ್ಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಮುದಾಯವು ಮುಂದೆ ಬರಬೇಕಾಗಿದೆ ಎಂದು ತಿಳಿಸಿದರು
ಇನ್ನು ಈ ವೇಳೆ ಮಾಜಿ ಪ್ರಭು ಗೌರವಧ್ಯಾಕ್ಷ ಮಂಜುನಾಥ್ ಲ್ಯಾಬ ಮೃತ್ಯುಂಜಯ ಮಾತನಾಡಿದರು,
ಇನ್ನು ಈ ವೇಳೆ ಕೃಷಿ ಅಧಿಕಾರಿ ಅಶೋಕ್ ವಿಜಯಕುಮಾರ್, j ನಾಗರಾಜ್, ರವಿಕುಮಾರ್, ವಿಶಾಲಪ್ಪ, ಪ್ರಕಾಶ್, ರಾಜಣ್ಣ, ಬಾಲಾಜಿ ದೇವಣ್ಣ ಸಮಾರಂಭದ ನಿರೂಪಕ ಶ್ರೀನಿವಾಸ್ ಚಂದ್ರು ಮೂರ್ತಿ ಸೇರಿದಂತೆ ಅನೇಕ ಮಾಜಿ ಪ್ರಭು ಸಮುದಾಯದ ಬಾಂಧವರು ಭಾಗಿಯಾಗಿದ್ದರು,