ನಾಯಕನಹಟ್ಟಿ:: ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ತಹಸಿಲ್ದಾರ್ ರೇಹಾನ್ ಪಾಷಾ ಗ್ರಾಮಸ್ಥರಲ್ಲಿ ಮನವಿ.
ಬುಧವಾರ ಸಂಜೆ ಸಮೀಪದ ನಲಗೇತನಹಟ್ಟಿ ಗ್ರಾಮಕ್ಕೆ ಸಮಾಜ ಕಲ್ಯಾಣಿ ಇಲಾಖೆ ವತಿಯಿಂದ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿಯಾಗಿ ಮಹಿಳೆಯರು ಕುಂಭಮೇಳದೊಂದಿಗೆ ಮತ್ತು ಯುವಕರು ಪಟಾಕಿ ಸಿಡಿಸುವುದರ ಮೂಲಕ ತಮಟೆ ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿಯಾಗಿ ಗ್ರಾಮಕ್ಕೆ ಬರಮಾಡಿಕೊಂಡರು.
ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಗ್ರಾಮಸ್ಥರಲ್ಲಿ ಸಂವಿಧಾನ ಜಾಗೃತಿ ಮೂಡಿಸಲಾಯಿತು.
ಇದೆ ವೇಳೆ ತಹಸಿಲ್ದಾರ್ ರೇಹಾನ್ ಪಾಷ, ಇಒ ಶಶಿಧರ್, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಉಪಾಧ್ಯಕ್ಷ ಈಗಲು ಬೋರಯ್ಯ, ಸದಸ್ಯರಾದ ಪಿ ಎನ್ ಮುತ್ತಯ್ಯ, ಬಂಗಾರಪ್ಪ, ಗ್ರಾಮಸ್ಥರಾದ ಎಸ್ ಜಿ ಸಣ್ಣ ಬೋರಯ್ಯ, ನಿಂಗರಾಜ್, ಎಂ. ಬಿ .ಸಣ್ಣ ಬೋರಯ್ಯ, ಗ್ರಾಮ ಲೆಕ್ಕಾಧಿಕಾರಿ ಹರೀಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆಂಚಪ್ಪ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ ವಿಶ್ವನಾಥ್ ಶಿಕ್ಷಕ ಸತೀಶ್ ಬಾಬು, ಅಂಗನವಾಡಿ ಶಿಕ್ಷಕಿರಾದ. ಕೆ ಬಿ. ಬೋರಮ್ಮ, ಸಿ ಬಿ ಚಂದ್ರಮತಿ, ವಿಮಲಾಕ್ಷಿ, ಈ ಎಸ್ ರಮ್ಯಾ, ಸುಧಾ, ಮಲ್ಲಮ್ಮ, ಲಕ್ಕಮ್ಮ, ಸಹಾಯಕಿರಾದ ಎ ಒ. ಬೋರಮ್ಮ, ಕಲಾವತಿ, ಅನುಷಾ, ಮಂಜಮ್ಮ, ಬಿಬಿ ಜಾನ್ ಹಾಗೂ ಗ್ರಾಮಸ್ಥರು ಇದ್ದರು