ಚಳ್ಳಕೆರೆ : ರಾಜ್ಯದಲ್ಲಿ ಒಂದು ಲಕ್ಷದ ಹದಿನೆಂಟು ಸಾವಿರ ಜನ ಬಿಸಿಯೂಟ ತಯಾರಿಕ ಮಹಿಳೆಯರು ಕನಿಷ್ಟ ರೂ 3700/ ಮತ್ತು ಸಹಾಯಕ ಅಡುಗೆಯವರಿಗೆ ರೂ3600 ಮಾತ್ರ ನೀಡುತ್ತಿದ್ದು,

ಚುನಾವಣೆ ಸಮಯದಲ್ಲಿ ನೀಡಿದಂತ ಪ್ರಣಾಳಿಕೆಯಂತೆ 3700 ರಿಂದ 10.000 ಸಾವಿರಕ್ಕೆ ವೇತನ ಹೆಚ್ಚಿಸಬೇಕು ಸೇವಾ ಭದ್ರತೆ ನೀಡಬೇಕು ಎಂದು ಸಿಐಟಿಯುಸಿನ ಜಿಲ್ಲಾಧ್ಯಕ್ಷ ಸಿವೈ.ಶಿವರುದ್ರಪ್ಪ ಮನವಿ ಮಾಡಿದರು.

ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತಿ ಮುಂಭಾಗದಲ್ಲಿ ಶಾಸಕ ಟಿ.ರಘುಮೂರ್ತಿ ಯವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು ಮಧ್ಯಾಹ್ನ ಉಪಹಾರ ಯೋಜನೆಯಡಿ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿ ಊಟ ತಯಾರಕರ ಬೇಡಿಕೆಗಳನ್ನು ಈಡೇರಿಸುವಂತೆ, ರಾಜ್ಯ ಸರ್ಕಾರದ ಮೇಲೆ ಶಾಸಕರು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಈ ವರ್ಷ ಬಜೆಟ್ ನಲ್ಲಿ ಬಿಸಿಯೂಟ ತಯಾರಕ ಮಹಿಳೆಯರ. ಪರವಾಗಿ ಸದನದಲ್ಲಿ ಧ್ವನಿ ಎತ್ತಬೇಕಾಗಿದೆ.

2023 ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ತಿಂಗಳಿಗೆ 6000 ರೂಗಳವರಗೆ ವೇತನ ಹೆಚ್ಚಿಸಲಾಗುವುದು ಇದನ್ನ 6 ನೇ ಗ್ಯಾರಂಟಿಯಾಗಿ ಘೊಷಣೆ ಮಾಡಿದ್ದೆವೆ ಎಂದು
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರೀಯಾಂಕಾ ಗಾಂಧಿ ಹೇಳಿದ್ದರು.

ಅವರು ನೀಡಿದ ಭರವಸೆಯಂತೆ ಬರುವ ಬಜೆಟ್ ನಲ್ಲಿ ವೇತನ ಹೆಚ್ಚಿಸಬೇಕು,,ಹಾಗೂ ಬಿಸಿಯೂಟ ತಯಾರಕ ಕೆಲಸವನ್ನ ಖಾಯಂ ಗೊಳಿಸಬೇಕು, ಬಿಸಿಯಾಟ ತಯಾರಕೆಯಿಂದ ನಿವೃತ್ತಿ ಹೊಂದಿದ ಬಿಸಿಯೂಟ ತಯಾರಕರಿಗೆ 60 ವರ್ಷ ವಯಸ್ಸಿನ ನಿವೃತ್ತಿ ಯಾದವರಿಗೆ 2 ಲಕ್ಷ ಹಣ ಬಿಡುಗಡೆ ಮಾಡಬೇಕು ನಾನಾ ಬೇಡಿಕೆಗಳನ್ನ ಹಿಡೇರಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಸದನದಲ್ಲಿ ಈ ವಿಷಯವಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಇದೇ ಸಂಧರ್ಭದಲ್ಲಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಿಸಿಯೂಟ ತಯಾರಕರು ಅಧಿಕಾರಿಗಳು ಇದ್ದರು.

Namma Challakere Local News
error: Content is protected !!