ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಬೆಳಂ ಬೆಳ್ಳಿಗ್ಗೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ನಗರದ ಹೃದಯ ಭಾಗವಾದ ಬೆಂಗಳೂರು ರಸ್ತೆಯ ಪಶು ಆಸ್ವತ್ರೆ ಪಕ್ಕದ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಕಳ್ಳರು ತಡರಾತ್ರಿ ಅಂಗಡಿಯ ಶೆಟ್ಟರ್ ಹೊಡೆದು ಸುಮಾರು 3.ಸಾವಿರೂಗಳಷ್ಟು ಚಿಲ್ಲರೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಇನ್ನೂ ಇದೇ ಅಂಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ನಾಲ್ಕು ಬಾರಿ ಕಳ್ಳತನವಾಗಿರುವುದು ಕಂಡು ಬಂದಿದೆ ಎಂದು ಸ್ಥಳಿಯರ ಮಾತಾಗಿದೆ.
ಗಡಿ ಭಾಗದ ಚಳ್ಳಕೆರೆ ನಗರಕ್ಕೆ ಹೊರ ರಾಜ್ಯದ ಕಳ್ಳರ ನಂಟು ಇದೆ ಎಂಬ ಸಂಶಯವನ್ನು ಸ್ಥಳಿಯರು ಅಭಿವ್ಯಕ್ತ ಪಡಿಸಿದ್ದಾರೆ. ಕಳ್ಳತನಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಎಷ್ಟೆ ಕಸರತ್ತು ಮಾಡಿದರು ಮಾತ್ರ ಚಳ್ಳಕೆರೆ ನಗರದಲ್ಲಿ ಕಳ್ಳತನ ಪ್ರಕರಣಗಳು ಮಾಸುವ ಮುನ್ನೆವೇ ಮತ್ತೊಂದು ಕಳ್ಳತನ ಎಂಬ ಪ್ರಕರಣಗಳು ದಾಖಲಾಗುತ್ತಿವೆ ಇನ್ನೂ ಎಷ್ಟೋ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತದೆ ಹಾಗೆ ಮರೆಯಾಗುತ್ತಿವೆ
ಇನ್ನೂ ನಗರದಲ್ಲಿ ಪೊಲೀಸ್ ಗಸ್ತು ಹಾಗು ಪ್ರಮುಖ ರಸ್ತೆಗಳಲ್ಲಿ ನಗರಸಭೆಯಿಂದ ಅಳವಡಿಸಿದ ಸಿಸಿ ಕ್ಯಾಮಾರ ದುರಸ್ಥಿಯಿಂದ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತಿವೆ. ಕಳೆದ ವರ್ಷ ತಾಲೂಕಿನಲ್ಲಿ ದೇವಾಸ್ಥಾನಗಳನ್ನೆ ಟಾರ್ಗೆಟ್ ಮಾಡಿದ ಕಳ್ಳರು ಈ ಬಾರಿ ಮೊಬೈಲ್ ಪೊನ್‌ಗಳು, ಬೈಕ್‌ಗಳು, ಅಂಗಡಿ ಮುಗ್ಗಟ್ಟುಗಳನ್ನು ಗುರಿಯಾಗಿಸಿಕೊಂಡAತೆ ಕಾಣುತ್ತದೆ. ಒಟ್ಟಾರೆ ಸಿಸಿಕ್ಯಾಮಾರ್ ಅಳವಡಿಕೆ, ಹಾಗೂ ಪೊಲೀಸ್ ಗಸ್ತು ಹೆಚ್ಚಳ ಮಾಡುವಂತೆ ಸಾರ್ವಜನಿಕರ ಮಾತಾಗಿದೆ.

Namma Challakere Local News
error: Content is protected !!