ಚಳ್ಳಕೆರೆ :: ಹೋಬಳಿಯ ಮಲ್ಲೂರಹಳ್ಳಿ ಪಂಚಾಯ್ತಿಯ ದಾಸರ ಮುತ್ತೇನಹಳ್ಳಿಗ್ರಾಮದ ನಿವಾಸಿಗಳಾದ ತಂದೆ.ಓಬ ನಾಯಕ. ಕೆ.ತಾಯಿ.ಶ್ರೀ ಮತಿ ಬೋರಮ್ಮಎಂಬ ಬಡದಂಪತಿಗಳ ಮಗನಾದ ಕೆಂಗಯ್ಯ ಕೆ.ಓ ರವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಡಾ. ಪೂರ್ಣಿಮಾ ಬಿ.ಎನ್.ಮಾರ್ಗದರ್ಶನದಲ್ಲಿ ಸಾದಾರಪಡಿಸಿದ “ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಜಾನಪದೀಯ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗಿದೆ. ವಿದ್ಯಾರ್ಥಿಯ ಸಾಧನೆಗೆ ಜನಪದ ತಜ್ಞರಾದ ಪ್ರೊಫೆಸರ್ ಮಂಜುನಾಥ ಬೇವಿನಕಟ್ಟಿ ಹಾಗೂ ಪೋಷಕರಾದ ಧರ್ಮಪತ್ನಿಯಾದ ಸುನಿತ ಜಿ.ಎಸ್ ಸಹ ಶಿಕ್ಷಕರು ಮಗನಾದ ವಿಷ್ಣು ಚಂದನ್ ಕೆ. ಅಪ್ಪಂದಿರು ಅಣ್ಣಂದಿರು ಅಕ್ಕಂದಿರು ತಂಗಿದಿರು ಮಾವಂದಿರು ಮಕ್ಕಳು ಅಭಿನಂದಿಸಿದ್ದಾರೆ.

About The Author

Namma Challakere Local News
error: Content is protected !!