ಚಳ್ಳಕೆರೆ : ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್. ಘಟಕದ ವಾರ್ಷಿಕ ಶಿಬಿರದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿ ಜೀವನ ವಿಕನಸಗೊಳ್ಳಲು ಇಂತಹ ಎನ್‌ಎಸ್‌ಎಸ್ ಕ್ಯಾಂಪ್ ಅಮೂಲ್ಯವಾಗಿವೆ, ಇಂತಹ ವೇದಿಕೆಗಳಿಂದ ವ್ಯಕ್ತಿತ್ವ ವಿಕಸನದ ಜೋತೆಗೆ ಉತ್ತಮ ನಾಗರೀಕನಾಗಿ ಸಮಾಜದಲ್ಲಿ ಜೀವನ ರೂಪಿಸಿಕೊಳ್ಳುವ ಎಲ್ಲಾ ಹಂತಗಳು ಈ ಒಬ್ಬಂತು ದಿನಗಳ ಕ್ಯಾಂಪ್‌ನಲ್ಲಿ ದೊರೆಯುತ್ತವೆ ಆದ್ದರಿಂದ ಈ ದಿನಗಳನ್ನು ಎಲ್ಲಾ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬನ್ನಿ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ.ರಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ರಾಜಣ್ಣ, ಉಪಾಧ್ಯಕ್ಷೆ ಬಿಬಿಜಾನ್, ಸದಸ್ಯ ಬಸವರಾಜ್, ಪಾರಿಜಾತ, ಶಮಿಉಲ್ಲಾ, ಸಂಯೋಜಕರಾದ ಕೃಷ್ಣೇಗೌಡ, ವಿಜಯಕುಮಾರ್, ಮುಖಂಡರುಗಳಾದ ರಾಜಣ್ಣ, ಮಾರ್ಕಂಡೇಯ, ಚಿನ್ನಯ್ಯ, ಬೋಮಣ್ಣ, ಗುರುಮೂರ್ತಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.