ತಳಕು:: ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಸುಮಾರು 2000 ಕೋಟಿ ಅನುದಾನವನ್ನ ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಅವರು ಶುಕ್ರವಾರ ಹೋಬಳಿಯ ಬುಕ್ಕಾoಬುಧಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ದುರ್ಗಾಂಬಿಕಾ ದೇವಿ ಪ್ರಾರಂಭೋತ್ಸವ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮ ಮತ್ತು ಶ್ರೀ ಆಂಜನೇಯ ಸ್ವಾಮಿ ವಿಗ್ರಹ ಪ್ರಾಣ ಪ್ರತಿಷ್ಠಾಪನ ಮತ್ತು ಧ್ವಜ ಸ್ಥಂಭ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಭರವಸೆಯಲ್ಲಿದ್ದೇವೆ ಚಿತ್ರದುರ್ಗ ದಾವಣಗೆರೆ ಬೀದರ್ ಹಾವೇರಿವರೆಗೆ ಲೋಕಸಭಾ ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳು ಗೆಲ್ಲಿಸುತ್ತೇವೆ ಪ್ರಧಾನಿ ನರೇಂದ್ರ ಮೋದಿಜಿ ಕಾರ್ಯ ಸಾಧನೆ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸೇರಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಉತ್ತಮ ಕಾರ್ಯವನ್ನು ಮಾಡುವ ಮೂಲಕ ಇಡೀ ದೇಶವನ್ನೇ ಅಭಿವೃದ್ಧಿಪಥದಂತೆ ಕೊಂಡೊಯ್ಯತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ, ನಾಯಕನಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಮಂಡಲ ಕಾರ್ಯದರ್ಶಿ ಎಚ್ ವಿ ಪ್ರಕಾಶ್, ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ದಿವ್ಯ ಪ್ರಕಾಶ್, ಉಪಾಧ್ಯಕ್ಷ ಅಶೋಕ್, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಮತ್ತು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಎಸ್ ಪ್ರಕಾಶ್ ಉಪಾಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ಬಿಎಲ್ ನಾಗರಾಜ್, ಖಜಾಂಚಿ ಡಿ ಟಿ ತಿಮ್ಮಾರೆಡ್ಡಿ, ಮತ್ತು ಸರ್ವ ಸದಸ್ಯರು, ಹಾಗೂ ಶ್ರೀ ದುರ್ಗಾಂಬಿಕ ದೇವಿ ದೇವಸ್ಥಾನದ ಹಟ್ಟಿಯ ಯಜಮಾನರಾದ ಮಾರಣ್ಣ, ಎಂ ರಾಜಣ್ಣ, ಹೊನ್ನೂರಪ್ಪ ಮಲ್ಲೇಶ್, ಎಚ್. ಹೊನ್ನೂರಪ್ಪ, ತಿಪ್ಪೇಸ್ವಾಮಿ, ಲೋಕೇಶ್, ತಿಪ್ಪೇಶ್, ನಾಗೇಂದ್ರಪ್ಪ, ಮುಖ್ಯೋಪಾಧ್ಯಾಯ ಪಿ ಟಿ ತಿಪ್ಪೇಸ್ವಾಮಿ, ಎಚ್ ನಾಗರಾಜ್, ಮಹಾಂತೇಶ್, ಸೇರಿದಂತೆ ಬುಕ್ಕಾಂಬುಧಿಯ ಸಮಸ್ತ ಊರಿನ ಗ್ರಾಮಸ್ಥರು ಇದ್ದರು