ಚಳ್ಳಕೆರೆ ನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಲಿತ ಸಂಘರ್ಷ ಸಮಿತಿ (ಪರಿವರ್ತನಾವಾದ) ರಾಜ್ಯ ಕಲಾ ಮಂಡಳಿ ವತಿಯಿಂದ
ಅಕ್ಷರದ ಅವ್ವ ಸಾವಿತ್ರಿ ಬಾಯಿ ಅವರ ಜೀವನ ಚರಿತ್ರೆ ಕುರಿತು ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.
ಈದೇ ಸಂಧರ್ಭದಲ್ಲಿ ಕಲಾ ಮಂಡಳಿ ರಾಜ್ಯ ಅಧ್ಯಕ್ಷ ಕೆ ಟಿ.ಮುತ್ತುರಾಜ್ ಮಾತನಾಡಿ, ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದನ್ನು ಪಡೆಯುವ ಮೂಲಕ ಈಡೀ ಮಹಿಳಾ ಕುಲಕ್ಕೆ ಮಾರ್ಗದರ್ಶಿಯಾಗಿ ಉಳಿದಿದ್ದಾರೆ. ಇಂತಹವರ ಸಾಧನೆಯಲ್ಲಿ ಇಂದಿನ ಯುವ ಪ್ರತಿಭೆಗಳು ಬೆಳೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕಲಾ ಮಂಡಳಿ ರಾಜ್ಯ ಅಧ್ಯಕ್ಷ ಕೆ ಟಿ.ಮುತ್ತುರಾಜ್ , ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ್ ಹೆಗ್ಗೆರೆ, ತಾಲೂಕು ಅಧ್ಯಕ್ಷ ಡಿ.ರುದ್ರಮುನಿ, ಮಾರಪ್ಪ , ಶಾಲೆ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು