ಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಇಂದು ದಿಡೀರ್ ಭೇಟಿ ನೀಡಿ ಕಾಮಗಾರಿಯನ್ನು ವಿಕ್ಷಣೆ ಮಾಡಿದ್ದಾರೆ.
ಗೌರಸಮುದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧಿಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಾಡಿದಂತಹ ಖೋಖೋ, ಕಬಡ್ಡಿ, ವಾಲಿಬಾಲ್ ಹಾಗೂ ಯಕೋ ಪಾರ್ಕ್ ಕಾಮಗಾರಿಗಳನ್ನು ವಿಕ್ಷಣೆ ಮಾಡಿದ್ದಾರೆ
ಇನ್ನೂ ಕಾಮಗಾರಿಯನ್ನು ಉದ್ದೇಶಿಸಿ ಮಾತನಾಡಿ ಇಓ ಶಶಿಧರ್, ಗ್ರಾಮೀಣ ಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಉಪಯುಕ್ತವಾದ ಕ್ರಿಡಾಂಗಣ ಹಾಗು ಇನ್ನು ಕ್ರಿಡೆಗಳ ಅಂಕಣಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡುತ್ತಿರುವುದು ಶ್ಲಾಘನೀಯ ಆದರೆ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಬೇಕು, ಇಂತಹ ಮಕ್ಕಳಿಗೆ ಉಪಯುಕ್ತವಾದ ಕಾಮಗಾರಿಯಗಳು ಎಲ್ಲಾ ಗ್ರಾಮ ಪಂಚಾಯತಿ ಯಲ್ಲಿ ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ ಓಬಣ್ಣ, ಗ್ರಾಮ ಪಂಚಾಯತಿ ಅಭಿವೃದ್ಧಿಅಧಿಕಾರಿ ಹನುಮಂತರಾಯ, ಗ್ರಾಮ ಪಂಚಾಯತಿ ಸದಸ್ಯರಾದ ಜಿಎಂ ಈರಣ್ಣ, ಟಿ ಶಶಿಕುಮಾರ್, ಸಂಜಯ್ ಗೌಡ , ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು