ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಯನ್ನುವುದು ಮರೀಚೀಕೆಯಾಗಿದೆ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡುವುದು ತುಂಬಾ ತೊಂದರೆಯಾಗಿದೆ, ಇದರಿಂದ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಸಾಮಾಜ ಸೇವಕ ಹೆಚ್.ಎಸ್.ಸೈಯದ್ ನಗರಸಭೆ ಅಧಿಕಾರಿಗಳ ನಡೆಗೆ ಕಿಡಿಕಾರಿದರು.
ಅವರು ನಗರದಲ್ಲಿ ನಗರಸಭಾ ಕಾರ್ಯಾಲಯದಿಂದ 2024-25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು, ಬಿಡಾಡಿ ದನಗಳ ರಸ್ತೆ ಮಧ್ಯೆದಲ್ಲಿ ನಿಂತು ಸಾರ್ವಜನಿಕರಿಗೆ ಹಾಗೂ ವಾಹನ ಸಾವರರಿಗೆ ತುಂಬಾ ಕಿರಿಕಿರಿ ಮಾಡುತ್ತಾವೆ ಇದರಿಂದ ಅಪಘಾತಗಳು ಸಂಭವಿಸುತ್ತಾವೆ ಆದ್ದರಿಂದ ಬಿಡಾಡಿ ದನಗಳಿಗೆ ಕಡಿವಾಣ ಹಾಕಿ ಎಂದು ಜಗದೀಶ್ ಹೇಳಿದಾಗ, ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ ಧ್ವನಿಗೂಡಿಸಿ ಅದೇ ಸಂಖ್ಯೆಯಲ್ಲಿ ಬೀದಿ ನಾಯಿಗಳ ಸಂಖ್ಯೆಯು ಹೆಚ್ಚಿದೆ ಆದ್ದರಿಂದ ನಾಯಿಗಳಿಗೂ ಕಡಿವಾಣ ಹಾಕಬೇಕು ಇನ್ನೂ ರಾತ್ರಿ ಪಾಳೆಯದ ರಸ್ತೆ ಬದಿಯ ಹೋಟೆಲ್ಗಳಲ್ಲಿ ಬಿರಿಯಾನಿ, ಕಬಾಬ್ ಮಾಡಿ ಅದರ ತ್ಯಾಜ್ಯ ರಸ್ತೆ ಮೇಲೆ, ಚರಂಡಿ ಮೋರೆಗಳಿಗೆ ಹಾಕುವುದರಿಂದ ಆಸ್ವತ್ರೆ ಮುಂಬಾಗ ದುರ್ವಾಸನೆ ಬೀರುತ್ತದೆ ಎಂದರು.
ಇನ್ನೂ ನಗರದ ಬಹುತೇಕ ವಾರ್ಡ್ ಗಳಲ್ಲಿರುವ ಪಾರ್ಕ್ಗಳ ರಕ್ಷಣೆ, ನಗರದ ನಗರದ ವಿವಿಧ ಬಡವಾಣೆಯ ಡಾಂಬರ್ ರಸ್ತೆಗಳನ್ನು ಪೈಪ್ಲೈನ್ ಕಾಮಗಾರಿ ಹೆಸರಿನಲ್ಲಿ ಗುಂಡಿಗಳನ್ನು ತೋಡಿದ್ದು ದುರಸ್ಥಿ ಮಾಡದೆ ವಾಹನಗಳು ಅಪಘಾತವಾಗುತ್ತಿವೆ.
ಹಾಗೂ ನಗರದ ಬಹುತೇಕ ವಾರ್ಡ್ ಗಳಲ್ಲಿನ ರಸ್ತೆ, ಚರಂಡಿ ಹಾಗೂ ನಗರಸಭೆ ಆಸ್ತಿಗಳನ್ನು ಒತ್ತುವರಿ ತೆರವುಗೊಳಿಸುವಂತೆ ಪ್ರತಿ ಆಯ-ವ್ಯಯಾ ಸಭೆಯಲ್ಲಿ ಸಲಹೆ ನೀಡಿದ್ದರೂ ಸಹ ಅವುಗಳನ್ನು ಕಾರ್ಯಗತ ಗೊಳಿಸಿಲ್ಲ ಇದರಿಂದ ನಗರಭೆ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದೆ ಎಂದರು.
ವಕೀಲ ಪಾಪಣ್ಣ ಮಾತನಾಡಿಮ ಸುಮಾರು 30 ವರ್ಷಗಳಿಂದ ಕಂದಾಯ ಬಾಕಿ ಉಳಿಸಿ ಕೊಂಡಿರುವ ಗ್ರಾಹಕರಿಗೆ ಒಟಿಎಸ್ ಒಂದೇ ರಿಯಾತಿ ನೀಡುವ ಮೂಲಕ ಒಂದೇ ಕಂತಿನಲ್ಲಿ ಕರವಸೂಲಿ ಮಾಡಿದರೆ ನಗರಸಭೆಗೂ ಆಧಾಯ, ಗ್ರಾಹಕರಿಗೆ ಹೊರೆ ಕಡಿಮೆಯಾಗುತ್ತದೆ. ಅದೇ ರೀತಿ ನಗರದ ಸೋಮಗುದ್ದು ರಸ್ತೆಯಲ್ಲಿ ಸುಮಾರು ನೂರು ಮೀಟರ್ ರಸ್ತೆ ಒತ್ತುವರಿ ಮಾಡಿಕೊಂಡು ಅಕ್ರಮ ಮನೆಗಳನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ, ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ನಗರದ ಪ್ರಮುಖ ರಸ್ತೆ, ವಾರ್ಡ್ಗಳಲ್ಲಿ, ಸ್ಥಳದ ಬೀಗ ತೆರವುಗೊಳಿಸಿ, ಪುಟ್ ಬಾತ್ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಅಧಿಕಾರಿಗಳ ಗಮನ
ಸೆಳೆದರು.
ನಿವೃತ್ತ ಉಪನ್ಯಾಸಕರೊಬ್ಬರ ಖಾತೆ ಬದಲವಾಣೆ ಮಾಡಿಕೊಡಲು ಕಳೆದ ಎರಡು ವರ್ಷದಿಂದ ನಗರಸಭೆ ಕಛೇರಿಗೆ ಅಲೆದಾಡುತ್ತಿದ್ದೆನೆ ಇದರಿಂದ ನಾವು ಯಾರನ್ನು ಕೇಳಲಿ ಎಂದು ಸಭೆಯಲ್ಲಿ ಮೂಖ ವಿಸ್ಮಿತನಾಗಿ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಈದೇ ಸಂಧರ್ಭದಲ್ಲಿ ಪೌರಾಯುಕ್ತ ಚಂದ್ರಪ್ಪ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿ ನಗರಸಭೆಯಲ್ಲಿ ಸಿಬ್ಬಂದಿ ಕೊರೆತೆ ಇದೆ ಇರುವ ಸಿಬ್ಬಂದಿಯಲ್ಲಿ ನಗರದ ಸ್ವಚ್ಚತೆ ಮಾಡಿಸುತ್ತಿದೆವೆ ಇನ್ನೂ ಕಛೇರಿಯಲ್ಲಿ ಕೆಲಸಗಳನ್ನು ಹೆಚ್ಚುವರಿಯಾಗಿ ಸಿಬ್ಬಂದಿ ಮಾಡುತ್ತಿದ್ದಾರೆ ಇನ್ನೂ ಸಾರ್ವಜನಿಕರ ದೂರಗಳಿಗೆ ಸ್ವಂಧಿಸುತ್ತಾ ನಗರದ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾಗಿದ್ದೆವೆ ಎಂದರು.
ನಗರದಲ್ಲಿ ಬಳ್ಳಾರಿ ಹಾಗೂ ಪಾವಗಡ ರಸ್ತೆಗಳ ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕುಭೇರ್, ಶ್ರೀನಿವಾಸ್, ಶಿವಮೂರ್ತಿ, ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನಾ, ಮಂಜುಳಾ, ವೆಂಕಟೇಶ್, ಇತರ ಸದಸ್ಯರು ಹಾಗೂ ಸಾರ್ವಜನಿಕರಾದ ವೀರಭದ್ರ, ಜಗದೀಶ್, ಆರ್.ಪ್ರಸನ್ನ ಕುಮಾರ್, ಪ್ರಭುದೇವ, ಹಾಗೂ ಸಿಬ್ಬಂದಿ ವರ್ಗ ಇದ್ದರು.