ನಾಯಕನಹಟ್ಟಿ::ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ ಎಂದು ಕೆ. ಆರ್. ತಿಪ್ಪೇಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಮಲ್ಲೂರಹಳ್ಳಿ ಗ್ರಾಮದ ಶ್ರೀ ಮುಗಬಸವೇಶ್ವರ ಹೈಟೆಕ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಣೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ದೇಶದ ಯುವ ಪೀಳಿಗೆಯಲ್ಲಿ ಗಣಿತ ಕಲಿಯುವ ಕುರಿತು ಸಕರಾತ್ಮಕ ಮನೋಭಾವವನ್ನು ಬೆಳೆಸುವುದು ನಮ್ಮ ಕಾರ್ಯ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಗಣಿತದ ಚಟುವಟಿಕೆಗಳಲ್ಲಿ ಆಸಕ್ತಿಯುತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಬಾಳ ಸಂತೋಷದ ವಿಷಯ ಎಂದರು.
ಮುಖ್ಯ ಶಿಕ್ಷಕಿ ಎಂ ಟಿ ಸುನಿತಾ ಮಾತನಾಡಿ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತದೆ ಶ್ರೀನಿವಾಸ್ ಅವರು 32 ವರ್ಷ ಮಾತ್ರ ಬದುಕಿದ್ದರು ಆದರೆ ಗಣಿತದಲ್ಲಿ ಅವರು ಮಾಡಿದ ಸಾಧನೆ ಆಗಾದ ಶ್ರೀನಿವಾಸ್ ರಾಮಾನುಜನ್ ಅವರು ಬಾಲ್ಯದಿಂದಲೇ ಗಣಿತದಲ್ಲಿ ಬಹಳ ಆಸಕ್ತಿ ಹೊಂದಿದ್ದರು ಆದ್ದರಿಂದ ವಿದ್ಯಾರ್ಥಿಗಳು ಗಣಿತದಿಂದಲೇ ನಮ್ಮ ಜೀವನ ಉಜ್ವಲವಾಗುತ್ತದೆ ಗಣಿತ ಗೊತ್ತಿಲ್ಲದಿದ್ದರೆ ಬದುಕು ಕಷ್ಟ ಆಸಕ್ತಿಯಿಂದ ಕಲಿತರೆ ಗಣಿತದಷ್ಟು ಸುಲಭ ವಿಷಯ ಮತ್ತೊಂದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಮೂಗ ಬಸವೇಶ್ವರ ಶಾಲೆಯ ಕಾರ್ಯದರ್ಶಿ ಎನ್ ಆರ್ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕಿ ಎಂ ಟಿ ಸುನಿತಾ, ಶಿಕ್ಷಕ ಪಾಲಯ್ಯ, ಪಾಲಾಕ್ಷ, ಶಿಕ್ಷಕಿರಾದ ಶಿಲ್ಪ, ಲಕ್ಷ್ಮಿ, ನಾಗವೇಣಿ, ಮಹದೇವಮ್ಮ, ಸೌಂದರ್ಯ, ಸೇರಿದಂತೆ ವಿದ್ಯಾರ್ಥಿಗಳ ತಾಯಂದಿರು ವಿದ್ಯಾರ್ಥಿನಿಯರು ಇದ್ದರು