ಚಳ್ಳಕೆರೆ : ಶಿಕ್ಷಕರ ಬಗ್ಗೆ ಅಪಾರವಾದ ಅಭಿಮಾನ ಗೌರವ ಇರುವುದರಿಂದ ಕಳೆದ ದಿನಗಳಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಏಳನೇ ವೇತನ ಜಾರಿಗೆ ತರುವಂತೆ ನನ್ನದೆ ಪ್ರಶ್ನೆಯ ಮೂಲಕ ಈಡೀ ದಿನ ಬಾವಿಗಿಳಿದು ಧರಣಿ ಮಾಡಿದ್ದು ಇತಿಹಾಸದಲ್ಲೆ ಮೊದಲು ಎಂದು ಪದವಿದಾರ ಶಿಕ್ಷಕರ ಕ್ಷೇತ್ರದ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಅವರು ತಾಲೂಕಿನ ಎನ್.ದೇವರಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟಿçÃಯ ಗಣಿತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಗಣಿತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮನುಷ್ಯ ಬದುಕಿರುವುದು ಮುಖ್ಯವಲ್ಲ ಯಾವ ರೀತಿಯಲ್ಲಿ ಬದುಕಿದ್ದು ಅದು ಮೂಖ್ಯ ಆದ್ದರಿಂದ ಗಣಿತದ ಬಗ್ಗೆ 136 ವರ್ಷಗಳ ಹಿಂದೆ ಅವಿಷ್ಕಾರ ಮಾಡಿರುವ ಕೇವಲ 32 ವರ್ಷ ಬದುಕಿರುವ ಗಣಿತದ ಪಿತಾಮಹ ಸಿ.ವಿ.ರಾಮನ್ ರವರ ಈಗೀನ ಗಣಿತದ ಶಿಕ್ಷಕರಿಗೆ ಕೈಗನ್ನಡಿಯಾಗಿದ್ದಾರೆ. ಕಳೆದ ನನ್ನ ಅವಧಿಯಲ್ಲಿ ಶಾಲಾ ಅಭಿವೃದ್ದಿಗೆ ಅನುದಾನ ನೀಡಿದ್ದೆನೆ ಹೊರತು ಯಾವುದೇ ರಸ್ತೆಗೆ, ಚರಂಡಿಗೆ ಹಾಕಿಲ್ಲ, ಶಿಕ್ಷಕರ ಹೇಳಿಗೆಗೆ ಶ್ರಮಿಸಿದ್ದೆನೆ, ಎಲ್ಲಿಯೂ ಭಷ್ಟಚಾರ ಮಾಡಿಲ್ಲ, ನಿಮ್ಮ ಸೇವೆಗೆ ಮೂರು ಬಾರಿ ಆಯ್ಕೆ ಮಾಡಿದ್ದೀರಿ ನಿಮ್ಮ ಋಣ ನಮ್ಮ ಮೇಲೆ ಇದೆ, ಇನ್ನೂ ಗಣಿತ ಶಿಕ್ಷಕರು ಎಂದರೇ ಅದರ ಗೌರವೇ ಬೇರೆ ಆದ್ದರಿಂದ ಜಾವಬ್ದಾರಿಯುವತವಾಗಿ ಕಳೆದ ಬಾರಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದ ಚಿತ್ರದುರ್ಗ ಜಿಲ್ಲೆ ಈ ಭಾರಿಯೂ ಸ್ಥಾನವನ್ನು ಬಿಟ್ಟುಕೊಡದೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಇನ್ನೂ ಜಿಲ್ಲಾ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಮಾತನಾಡಿ, ಈಡೀ ಜಿಲ್ಲೆಯಲ್ಲಿ ವಿಶೇಷವಾಗಿ ಕಾರ್ಯಕ್ರಮ ಈ ಗ್ರಾಮೀಣ ಭಾಘದಲ್ಲಿ ಆಯೋಜಿಸಿರುವುದು ಮುಖ್ಯವಾಗಿದೆ, ಗಣಿತ ಭೋದನೆ ಮಾಡುವ ಜಿಲ್ಲೆಯ ನಿವೃತ್ತ ಶಿಕ್ಷಕರುಗಳಿಗೆ ಇಂದು ಸನ್ಮಾನಿಸುವ ಮೂಲಕ ಹಾಗೂ ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಯಲ್ಲಿ ಮೊದಲ ಸ್ಥಾನ ಪಡೆದ ಜಿಲ್ಲೆ ಈ ಬಾರಿಯೂ ಕೂಡ ಇನ್ನೂ ಹೆಚ್ಚಿನ ಶ್ರಮವಹಿಸಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಸಕಲ ತಯಾರಿ ನಡೆಯುತ್ತಿದೆ ಎಂದರು.
ಗಣಿತ ವಿಷಯದ ಜಿಲ್ಲಾ ಪರೀಕ್ಷಕರಾದ ಸವಿತಾ ಮಾತನಾಡಿ, ಮನುಷ್ಯನ ಜೀವನ ಗಣಿತದಿಂದ ಹೊರತಾಗಿಲ್ಲ, ಆದ್ದರಿಂದ ಗಣಿತದ ಲೆಕ್ಕ ಯಾರಿಗೆ ಇರುತ್ತದೆಯೋ ಅವರ ಜೀವನ ಪಕ್ಕಾ ಹಾಗಿರುತ್ತದೆ ಆದ್ದರಿಂದ ಗಣಿತ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ಕರೆ ಕೊಟ್ಟ ದಿನ ರಾಷ್ಟಿçÃಯ ಗಣಿತ ದಿನವನ್ನಾಗಿ ಆಚರಣೆ ಮಾಡಿಕೊಂಡು ಬಂದಿದೆವೆ, ಪ್ರತಿ ಶಾಲೆಯಲ್ಲಿ ಗಣಿತ ಪ್ರಯೋಗಲಾಯ ಮಾಡಿ ಮಕ್ಕಳ ಮನಸ್ಸಿನಲ್ಲೆ ಪ್ರಭಾವ ಬೀರುವ ಮೂಲಕ ಗಣಿತವನ್ನು ಭೊಧಿಸಬೇಕು ಎಂದರು.
ಇನ್ನೂ ಇಸ್ರೋ ನಿವೃತ್ತ ವಿಜ್ಞಾನಿಯಾದ ಹಿರಿಯಣ್ಣ ಮಾತನಾಡಿ, ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ. ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಇದುವರೆಗೆ ಯಾರು ಕಂಡಿಲ್ಲ. ಅವರನ್ನು ಅಯ್ಳರ್ ಅಥವಾ ಜುಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಮಾತ್ರ ಹೋಲಿಸಲು ಸಾಧ್ಯ. ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು ಎಂದರು.
ಈದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಜಿಲ್ಲಾ ಉಪಯೋಜನೆ ಸಮನ್ವಯ ಅದಿಕಾರಿಗಳಾದ ಸಿಎಸ್.ವೆಂಕಟೇಶಪ್ಪ, ಮುಖ್ಯ ಶಿಕ್ಷಕರಾದ ಡಿ.ಎಸ್.ಪಾಲಯ್ಯ, ರುದ್ರಮುನಿ, ಜಿಲ್ಲಾ ಅಧ್ಯಕ್ಷ ಶಿವಕುಮಾರ್, ಚಂದ್ರಶೇಖರ್, ರಾಜಕುಮಾರ್, ದಯಾನಂದ ಪ್ರಹ್ಲಾದ್, ಕಸಪಾ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಾಗರಾಜ್, ನಾಗಣ್ಣ, ಚಂದ್ರಣ್ಣ, ಶಶಿಕಲಾ,ಸುಮಾ, ಗುರುಮೂರ್ತಿ, ಕಾಟಯ್ಯ, ಶಂಕರ್ ಮೂರ್ತಿ, ಸಿದ್ದಪ್ಪ, ಬಸವರಾಜ್, ಮಲ್ಲಿಕಾರ್ಜುನಾ, ಇತರರು ಪಾಲ್ಗೊಂಡಿದ್ದರು.