ಚಳ್ಳಕೆರೆ : ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನರಸಭೆ ಪೌರಕಾರ್ಮಿಕರು ಕಾಯಂಗೊಳಿಸಬೇಕೆAದು ಆಗ್ರಹಿಸಿ ಪೌರ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಚಳ್ಳಕೆರೆ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರ ಬಹುದಿನದ ಬೇಡಿಕೆ 2017 ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ಖಾಯಂ ಗೊಳಿಸಲಾಯಿತು ಎಂದು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಹೇಳಿದರು.
ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ಕಳೆದ ಸರ್ಕಾರದಲ್ಲಿ ತೀರ್ವ ಹೋರಾಟದ ಪರಿಣಾಮ ನಗರ, ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರ ಪಾವತಿ ಕಡತ ಹಣಕಾಸು ಇಲಾಖೆಯಲ್ಲಿ ಪರಿಶೀಲನೆ ಇರುವಾಗಲೇ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿ ಕಡತ ನಗರಾಭಿವೃದ್ಧಿ ಇಲಾಖೆಗೆ ವಾಪಾಸಾಗಿದೆ.
ಈ ಸಂಬAಧ ಕಡತವನ್ನು ಸಂಪುಟದಲ್ಲಿ ಅಂಗೀಕರಿಸುವAತೆ ಚಳ್ಳಕೆರೆ ನಗರಸ¨S್ವ ಹೊರಗುತ್ತಿಗೆ ಕಾರ್ಮಿಕರು ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರು ಇಂದು ಅನಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ. ಕಳೆದ ದಿನಗಳಲ್ಲಿ ಚಳ್ಳಕೆರೆ ನಗರಸಭೆಯ ಆವರಣದಲ್ಲಿ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಚಳ್ಳಕೆರೆಯ ಜನಪ್ರಿಯ ಶಾಸಕರಾದ ಟಿ. ರಘುಮೂರ್ತಿರವರಿಗೆ ಚಳ್ಳಕೆರೆ ನಗರಸಭೆವತಿಯಿಂದ ಪೌರಕಾರ್ಮಿಕರಾದ ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರು ಮನವಿ ನೀಡಿರುತ್ತಾರೆ.
ಚಳ್ಳಕೆರೆ ನಗರಸಭೆಯ ಪೌರಾಯುಕ್ತರಿಗೆ ಈ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮವಹಿಸಲು ತಿಳಿಸಿರುತ್ತಾರೆ. ಹೊರಗುತ್ತಿಗೆ ನೇರ ಪಾವತಿ ಬಗ್ಗೆ, ನಗರಸಭೆಯ ಪೌರಾಯುಕ್ತರನ್ನು ಕೇಳಿದರ ಏನೇನೋ ಸಬೂಬು ಹೇಳುತ್ತ ಸಮಾದಾನ ಪಡಿಸುತ್ತಾರೆಂದು ನೇರ ಪಾವತಿಗೆ ಒತ್ತಾಯಿಸಿ ನಗರಸಭೆಯ ಕಛೇರಿ ಮುಂದೆ ಸ್ವಚ್ಛತಾ ಕೆಲಸ ಸ್ಥಗಿತ ಮಾಡಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಾಲುವುದು ಎಂದು ಪ್ರಸನ್ನಕುಮಾರ್. ಹನುಮಂತರಾಯ, ಮಂಜಣ್ಣ, ಮಂಜುನಾಥ, ದೇವರಾಜ್, ಪೆನ್ನೇಶ್ ಸೇರಿದಂತೆ 55 ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

Namma Challakere Local News
error: Content is protected !!