ನಾಯಕನಹಟ್ಟಿ :

ನಾಯಕನಹಟ್ಟಿ ಪಟ್ಟಣದ ಕಾರ್ಯಲಯದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ ಇವರ ಸಹಯೋಗದೊಂದಿಗೆ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ನಗರ ಬಡಜನರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅರಿವು ಮೂಡಿಸಲು ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣದ ಬೀದಿ ಬದಿಯಲ್ಲಿ ಉದ್ಯಮೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ, ಒಂದು ರಾಷ್ಟç ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಬಿಓಸಿಡಬ್ಲೂö್ಯ ಅಡಿಯಲ್ಲಿ ನೋಂದಣಿ, ಪ್ರಧಾನ ಮಂತ್ರಿ ಜನನಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಇವುಗಳ ಜೊತೆಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಿಂದ ದೇಶದ ಆರ್ಥಿಕವಾಗಿ ಹಿಂದುಳಿದ ಬಡಜನರಿಗೆ ಕೇಂದ್ರ ಸರ್ಕಾರದಿಂದ ಹಣ್ಣು, ತರಕಾರಿ, ಎಲೆ-ಅಡಿಕೆ, ತೆಂಗಿನಕಾಯಿ, ಬಳೆ, ಬಟ್ಟೆ ಮಾರುವವರು, ಚರ್ಮಕಾರರು, ಕ್ಷೌರಿಕರು, ಹೂವು ಮಾರುವರು, ಟೀ ಅಂಗಡಿದವರು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಜೀವನವನ್ನು ರೊಪಿಸಿಕೊಳ್ಳಲು ಸೂಕ್ತವಾದ ಯೋಜನೆಯಾಗಿದೆ ಎಂದು ಪಟ್ಟಣ ಪಂಚಾಯ್ತಿ ಸಮುದಾಯ ಸಂಘಟಕರಾದ ನಾಗರತ್ನಮ್ಮ ಹೇಳಿದರು.

ಈ ಸಂದರ್ಭದಲ್ಲಿ ಕೆನಾರಾ ಬ್ಯಾಂಕ್ ವ್ಯವಸ್ಥಾಪಕ ಜಿ, ರಾಮ್ ಮೋಹನ್, ಪಟ್ಟಣ ಪಂಚಾಯ್ತಿ ಪ್ರಭಾರ ಮುಖ್ಯಾಧಿಕಾರಿ ಶಿವಕುಮಾರ್, ಸಮುದಾಯ ಸಂಘಟಕರಾದ ಶ್ರೀಮತಿ ನಾಗರತ್ನಮ್ಮ, ಕೆನಾರಾ ಬ್ಯಾಂಕ್ ವ್ಯವಸ್ಥಾಪಕ ಜಿ, ರಾಮ್ ಮೋಹನ್, ಎಸ್ ಓ ಕೆಂಚಪ್ಪ ಲೆಕ್ಕ ಪರಿಶೋದನೆ ಅಧಿಕಾರಿಗಳು, ಸುನೀತ ಲೆಕ್ಕ ಪರಿಶೋದನೆ ಅಧಿಕಾರಿಗಳು, ತಿಪ್ಪೇಸ್ವಾಮಿ, ಸುರೇಶ, ಸಂದೀಪ್, ದಯಾನಂದ, ಅಭಿ, ರೇಣುಕಮ್ಮ, ಬೀದಿ ಬದಿಯ ವ್ಯಾಪರಸ್ಥರು ಹಾಗೂ ಇತತರು ಇದ್ದರು.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಿಂದ ಬೀದಿ ಬದಿ ವ್ಯಾಪರಸ್ಥರು ದಿನನಿತ್ಯದ ಸಂಭಾವನೆಯಿAದ ಕುಟುಂಬವನ್ನು ನಡೆಸಿಕೊಂಡು ಹೋಗುವ ಬಗ್ಗೆ, ಸಣ್ಣ ಉದ್ಯೂಗ ಇಲ್ಲಂದರೆ ಕುಟುಂಬ ನಿರ್ವಹಣೆ ಪ್ರತಿದಿನ ಮನೆಗಳಲ್ಲಿ ಅನುನೂಕಲಗಳ ಬಗ್ಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಜನರಿಗೆ ಸಿಗುವಂತಹ ಸೌಲಭ್ಯಗಳ ಬಗ್ಗೆ ಎಸ್ ಓ ಕೆಂಚಪ್ಪ ಲೆಕ್ಕ ಪರಿಶೋದನೆ ಅಧಿಕಾರಿಗಳು ಹೇಳಿದರು.

ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪರಸ್ಥರು ಪಟ್ಟಣ ಪಂಚಾಯ್ತಿ ಕಾರ್ಯಾಲಯ ಬೇಟಿ ನೀಡಿ ಈ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಸಾಲ ಸೌಲಭ್ಯಗಳು, ತರಬೇತಿಗಳು, ಆರ್ಥಿಕವಾಗಿ ಹಿಂದುಳಿದ ಬಡಜನರು ಈ ಯೋಜನೆಯನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೆನಾರಾ ಬ್ಯಾಂಕ್ ವ್ಯವಸ್ಥಾಪಕ ಜಿ, ರಾಮ್ ಮೋಹನ್ ಹೇಳಿದರು.

ಸದರಿ ಯೋಜನೆಯಡಿಯಲ್ಲಿ ಈ ಕೆಳಕಂಡAತೆ ವ್ಯಾಪರಸ್ಥರಿಗೆ ಸಾಲ ನೀಡಲಾಗುತ್ತದೆ

ಮೊದಲನೇ ಹಂತದಲ್ಲಿ ಪಟ್ಟಣ ಪಂಚಾಯಿತಿಯಿAದ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರವನ್ನು ಪಡೆದಿರುವ ಮತ್ತು ಸಾಮಾನ್ಯ ಜನರಿಗೆ ಸೇವೆಯನ್ನು ಒದಗಿಸುತ್ತಿರುವ ವಿವಿಧ ಕ್ಷೇತ್ರಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಮೂಲಕ ರೂ 10.000/- ಸಾಲ ನೀಡಲಾಗುವುದು.

ಎರಡನೇಯ ಹಂತದಲ್ಲಿ ರೂ, 20.000/- ಸಾಲ ನೀಡಲಾಗುತ್ತದೆ.
ಮೊದಲನೇ ಹಂತದಲ್ಲಿ ರೂ, 10,000/- ಸಾಲ ಪಡೆದು ಬ್ಯಾಂಕಿಗೆ ನಿಗಿದಿತ ಸಮಯದಲ್ಲಿ ಪ್ರತಿ ತಿಂಗಳು ಸಾಲವನ್ನು ಮರುಪಾತಿ ಮಾಡಿದ ವ್ಯಾಪರಸ್ಥರಿಗೆ ಎನ್.ಒ.ಸಿ ಪ್ರತಿಯನ್ನು ಮೂಲಕ 20,000/- ಸಾಲವನ್ನು ಬ್ಯಾಂಕಿನಿAದ ಸಾಲ ನೀಡಲಾಗುತ್ತದೆ.

ಮೂರನೇ ಹಂತದಲ್ಲಿ ರೂ. 50,000/- ಸಾಲ ನೀಡಲಾಗುತ್ತದೆ.
ಎರಡನೇ ಹಂತದಲ್ಲಿ ರೂ.20.000/- ಸಾಲವನ್ನು ಪಡೆದು ಬ್ಯಾಂಕಿಗೆ ನಿಗಧಿತ ಸಮಯದಲ್ಲಿ ಪ್ರತಿ ತಿಂಗಳು ಸಾಲವನ್ನು ಮರುಪಾವತಿ ಮಾಡಿ ಎನ್.ಒ.ಸಿ ಪ್ರತಿಯನ್ನು ಬ್ಯಾಂಕಿನಿAದ ಪಡೆದು ಪಟ್ಟಣ ಪಂಚಾಯಿತಿಯ ಡೇ ನಲ್ಮ್ ವಿಭಾಗಕ್ಕೆ ಸಲ್ಲಿಸಿದರೆ ಅಂತಹ ಅರ್ಹ ಫಲಾನುಭವಿಗೆ ರೂ. 50.000/- ಸಾಲವನ್ನು ಬ್ಯಾಂಕಿನಿAದ ನೀಡಲಾಗುತ್ತಿದೆ.

ಈ ಯೋಜನೆಯಡಿ ಅರ್ಜಿಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಉಳಿತಾಯ ಖಾತೆ ಪುಸ್ತಕ, ವ್ಯಾಪಾರದ ಪೋಟೋ, ಅರ್ಜಿದಾರರ ಭಾವ ಚಿತ್ರ 2 (ಪಾಸ್ ಪೋಟೋ), ಬೀದಿ ಬದಿ ವ್ಯಾಪರಸ್ಥರ ಗುರುತಿನ ಚೀಟಿ ಈ ಎಲ್ಲಾ ದಾಖಲಾತಿಗಳನ್ನು ತಗೆದುಕೊಂಡು ನಾಯಕನಹಟ್ಟಿ ಪಟ್ಟಣ ಪಂಚಾಯ್ತಿ ಕಾರ್ಯಾಲಯ ಡೇ-ನಲ್ಮ್ ವಿಭಾಗದ ಸಿಬ್ಬಂದಿಯನ್ನು ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಬಹುದು.

Namma Challakere Local News
error: Content is protected !!