ಚಳ್ಳಕೆರೆ : ಈಡೀ ರಾಜ್ಯದಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ರಯೋಗಿಕವಾಗಿ ಬೆಳೆಪರಿಹಾರದ ಮೊತ್ತವನ್ನು ರೈತರ ಖಾತೆಗೆ ವರ್ಗಾವಾಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದ್ದು ಚಳ್ಳಕೆರೆ ತಾಲೂಕಿನಲ್ಲಿ ಇದುವರೆಗೂ ಶೇ 75 ಮಾತ್ರ ರೈತರು ಎಫ್ ಐ ಡಿ ಮಾಡಿಸಿದ್ದು ಬೆಳೆವಿಮೆ, ಪಡೆಯಲು ಎಪ್‌ಐಡಿ ಕಡ್ಡಾಯವಾಗಿದ್ದು ರೈತರಿಗೆ ಮನವರಿಕೆ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ತಾಕೀತು ಮಾಡಿದರು.
ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕಂದಾಯ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಬೆಳೆ ಪರಿಹಾರ ಪೂರ್ವ ಸಿಧ್ದತೆ ಬಗ್ಗೆ ಅಯೋಜಿಸಿದ್ದ ಜೂಮ್ ಮೀಟಿಂಗ್ ನಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ರೈತರ ಖಾತೆಗೆ ಎಫ್ ಐ ಡಿ ಮೂಲಕ ಬೆಳೆಪರಿಹಾರ ಜಮೆ ಮಾಡಲಿದ್ದು ಅಧಿಕಾರಿಗಳು ಕೂಡಲೆ ರೈತರ ಪಹಣಿಗೆ ಎಫ್ ಐ ಡಿ ಮಾಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಕಾರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿರ ತಾಲೂಕುಗಳು ಎಂದು ಘೋಷಣೆ ಮಾಡಿದ್ದು, ಫ್ರುಟ್ಸ್ ತಂತ್ರಾAಶದಲ್ಲಿ ರೈತರ ಪಹಣಿಗೆ ಆಧಾರ್ ಜೋಡಣೆ ಮಾಡಿಸಿಕೊಂಡವರಿಗೆ ನೇರವಾಗಿ ರೈತರ ಖಾತೆ ಹ ಬೀಳಲಿದೆ. ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾAಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾAಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸುವಂತೆ ಕಂದಾಯ. ಕೃಷಿ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜೂಮ್ ಮಿಟಿಂಗ್ ಮೂಲಕ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ
ಇನ್ನೂ ಜೂಮ್ ಮೀಟಿಂಗ್‌ನಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ. ಕೃಷಿ ತಾಂತ್ರಿಕ ಅಧಿಕಾರಿ ಮೇಘನಾ. ಕಂದಾಯ ನಿರೀಕ್ಷರಾದ ಲಿಂಗೇಗೌಡ. ತಿಪ್ಪೇಸ್ವಾಮಿ. ರಾಜೇಶ್. ಚೇತನ್ ಕುಮಾರ್. ತಾಲೂಕಿನ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!