ಚಳ್ಳಕೆರೆ : ಡಿಸೆಂಬರ್ 31 ರಂದು ಇ-ಕೆವೈಸಿ ಆಧಾರ್ ಲಿಂಕ್ ಮಾಡಿಸಲು ಕೊನೆಯ ದಿನಾಂಕ ಹಾಗಿರುವುದರಿಂದ ಗ್ಯಾಸ್ ಸೌಲಭ್ಯ ಪಡೆದ ಸಾರ್ವಜನಿಕರು ರಾತ್ರಿಯಲ್ಲ ನಿದ್ದೆ ಇಲ್ಲದೆ ಗ್ಯಾಸ್ ಏಜಿನ್ಸಿ ಮುಂದೆ ಸರಥಿ ಸಾಲಿನಲ್ಲಿ ನಿಲ್ಲುವುದು ಕಾಣಬಹುದಾಗಿದೆ.
ಅದರಂತೆ ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಕೈಲಾಸ ಗ್ಯಾಸ್ ಏಜೆನ್ಸಿಯ ಅಂಗಡಿ ಮುಂದೆ ಕಳೆದ ಹಲವು ದಿನಗಳಿಂದ ನೂರಾರು ಮಹಿಳೆಯರು ವೃದ್ದರು, ಹಾಗೂ ಅಂಗವಿಕಲರು ಈ ಕೆವೈಸಿ ಮಾಡಿಸಲು ಸರಥಿ ಸಾಲಿನಲ್ಲಿ ನಿಂತಿದ್ದಾರೆ.
ಇನ್ನೂ ಕೈಲಾಸ್ ಗ್ಯಾಸ್ ಏಜೆನ್ಸಿ ಮಾಲೀಕತ್ವದಲ್ಲಿ ನಗರದ ಸುಮಾರು 9 ಸಾವಿರಕ್ಕೂ ಹೆಚ್ಚಿನ ಗ್ಯಾಸ್ ವಿತರಕರ ಫಲಾನುಭವಿಗಳು ಇದ್ದಾರೆ ಇವರೆಗೆಲ್ಲ ಕೇವಲ ಒಂದೇ ಒಂದು ಕಂಪ್ಯೂಟರ್ ನಲ್ಲಿ ಇಕೆವೈಸಿ ಮಾಡಿದರೆ ಈಡೀ ದಿನ ಕೂಲಿ ಬಿಟ್ಟು ಕಾಯುವ ಪರಸ್ಥಿತಿ ಇದೆ ಆದರೆ ಇವರ ಬಗ್ಗೆ ಸಂಬAಧ ಪಟ್ಟ ಅಧಿಕಾರಿಗಳು ಸೂಚನೆ ನೀಡಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.