ಚಳ್ಳಕೆರೆ : ರಾಷ್ಟ್ರೀಯ ಮತದಾರ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳ ನಿರ್ದೇಶನದಂತೆ ತಾಲ್ಲೂಕು ಮತದಾರ ಸಾಕ್ಷರತಾ ಸಂಘದ ವತಿಯಿಂದ ಚಳ್ಳಕೆರೆ ತಾಲೂಕಿನ ಒಟ್ಟು 66 ಶಾಲೆಗಳಿಂದ 120ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೌಢಶಾಲೆಗಳ ಮಕ್ಕಳಿಗೆ ಪ್ರಬಂಧ ಸ್ಪರ್ಧೆ (ಕನ್ನಡ&ಆಂಗ್ಲಮಾಧ್ಯಮ) ಪೋಸ್ಟರ್ ಡಿಸೈನ್ (ಭಿತ್ತಿಪತ್ರ) ತಯಾರಿಕೆ. , ರಸಪ್ರಶ್ನೆ. ಸ್ಪರ್ಧೆಗಳನ್ನು
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಇ.ಓ.ಕೆ.ಎಸ್.ಸುರೇಶ್ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಸುಭ್ರದ ಬುನಾದಿಗೆ ಯುವ ಮತದಾರರ ಅಗತ್ಯ ಅಂತಹ ಯುವಕರಿಗೆ ವಿದ್ಯಾರ್ಥಿ ದೆಸೆಯಲ್ಲಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ಕೆಲವು ಸ್ಪರ್ಧೇಗಳ ಮೂಲಕ ಚುನಾವಣೆ ಆಯೋಗ ಆಯೋಜಿಸಿ ಇಂದು ಸ್ಪಧೇ ಏರ್ಪಡಿಸಿದೆ ಎಂದರು.
ಇನ್ನೂ ಪ್ರಾಸ್ತಾವಿಕವಾಗಿ ಜಿಲ್ಲಾ ಇ.ಎಲ್.ಸಿ.ನೋಡಲ್ ಅಧಿಕಾರಿಗಳಾದ ಹೆಚ್.ಟಿ.ಚಂದ್ರಣ್ಣ ಮಾತನಾಡಿ ಶಾಲಾ ಕಾಲೇಜು ಹಂತ ಪ್ರಮುಖವಾದ ಘಟ್ಟ ಇಂತಹ ವಯೋಮಾನದ ಯುವ ವಯಸ್ಕರರು ಪ್ರಜಾಪ್ರಭುತ್ವದ ಒಂದು ಅಂಗವಿದ್ದಾಗೆ, ದೇಶದ ಭವಿಷ್ಯಕ್ಕೆ ಶಾಲಾ ಹಂತದಲ್ಲೆ ಪಠ್ಯಧಾರಿತವಾಗಿ ಕಲಿಕೆ ಹಿಂಬು ನೀಡುವ ಮೂಲಕ ಉತ್ತೆಜನಗೊಳಿಸುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ಇ.ಎಲ್.ಸಿ.ನೋಡಲ್ ಅಧಿಕಾರಿಗಳಾದ ಇ.ಸಿ.ಓ.ಮಾರುತಿಭಂಡಾರಿ, ತೀರ್ಪಗಾರರಾಗಿ ಹೆಚ್ .ಸಿ.ಶಿವಮೂರ್ತಿ., ಈರಣ್ಣ ಡಿ, ಮೂರ್ತಿ, ಬೋರಯ್ಯ, ರೂಪಶ್ರೀ, ಸಿಆರ್‌ಪಿ ಶಿವಣ್ಣ, ದಾದಾಪೀರ್, ನಾಗರಾಜ್ ಹಾಜರಿದ್ದರು.