ಚಳ್ಳಕೆರೆ : ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿರುವ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ವೃತ್ತದ ಪ್ರತಿಮೆಗೆ ತಾಲೂಕು ಆಡಳಿತದಿಂದ ತಹಶೀಲ್ದಾರ್ ರೇಹಾನ್ ಪಾಷ ಮಾಲಾರ್ಪಣೆ ಮಾಡುವ ಮುಖಾಂತರ ಹಾಗೂ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಅಂಬೇಡ್ಕರ್ ಕೇವಲ ಯಾವುದೋ ಒಂದು ಜಾತಿಗೆ ಸಿಮಿತವಲ್ಲ ಭಾರತೀಯ ಪ್ರತಿಯೊಬ್ಬರಿಗೂ ನ್ಯಾಯ ಸಮ್ಮತವಾದ ಹಕ್ಕು ನೀಡುವಲ್ಲಿ ವಿಶ್ವ ಮೆಚ್ಚುವಂತ ಸಂವಿಧಾನ ನೀಡಿದ್ದಾರೆ, ಸಂವಿಧಾನ ಅಂಗೀಕರವಾದ ದಿನ ಇಂದು ನಮ್ಮೆಲ್ಲರ ಹಕ್ಕು ಕರ್ತವ್ಯಗಳನ್ನು ನೆನೆಯುವಂತಹ ದಿನವಾಗಿದೆ ಎಂದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಂವಿದಾನ ದಿನಾಚರಣೆ ಸಮರ್ಪಣ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ 22 ಸದಸ್ಯರನ್ನು ಒಳಗೊಂಡAತೆ ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಸಂವಿಧಾನವನ್ನು ರಚನೆ ಮಾಡಿ 1949 ನವಂಬರ್ 26ರಂದು ಸಂವಿಧಾನ ಸಮರ್ಪಣ ದಿನವಾಗಿ ಆಚರಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಸಹಾಯಕ ಕೃಷಿ ನಿರ್ಧೇಶಕ ಡಾ.ಅಶೋಕ್, ತೋಟಗಾರಿ ಹಿರಿಯ ಸಹಾಯಕ ನಿರ್ಧೇಶಕ ಡಾ.ವಿರುಪಾಕ್ಷಪ್ಪ, ಶಿರಸ್ತೆದಾರ್ ಗಿರೀಶ್, ಲಿಂಗೇಗೌಡ, ಸದಾಶಿವಪ್ಪ, ಪ್ರಕಾಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು

Namma Challakere Local News
error: Content is protected !!