ಚಳ್ಳಕೆರೆ : ಹಳ್ಳಿಗಳಲ್ಲಿ ಜನರು ಬರಗಾಲದಿಂದ ತತ್ತರಿಸಿ ಊರು ಖಾಲಿ ಮಾಡುತ್ತಿದ್ದಾರೆ, ಜೀವನಕ್ಕಾಗಿ ರೈತರು ಕೂಲಿಕಾರರು ಹೊಟ್ಟೆ ಹೊರೆಯಲು ಪಟ್ಟಣದತ್ತ ವಲಸೆ ಹೋಗುವಂತ ಪರಸ್ಥಿತಿ ನಿರ್ಮಾಣವಾಗಿದೆ ಆದರೆ ಇಂತಹ ಸಂಧರ್ಭದಲ್ಲಿ ಬ್ಯಾಂಕ್‌ನವರು ರೈತರ ಸಾಲ ವಸೂಲಿಗೆ ಲಾಯರ್ ಮೂಲಕ ನೋಟೀಸ್ ನೀಡಿ ರೈತರನ್ನು ಹೆದರಿಸಿ ಸಾಲ ವಸೂಲಿ ಮಾಡುತ್ತಿರುವ ಬ್ಯಾಂಕ್‌ಗಳ ವಿರುದ್ಧ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ರೈತರ ಆತ್ಮಹತ್ಯೆ ಅಂತಹ ಪ್ರಕರಣಗಳನ್ನು ತಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಚಳ್ಳಕೆರೆ ತಾಲ್ಲೂಕು ಕಛೇರಿ ಮುಂದೆ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಬ್ಯಾಂಕ್ ನವರಿಂದ ಮುಕ್ತಿ ಕಾಣಿಸಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಿದರು.
ಇನ್ನೂ ಚಳ್ಳಕೆರೆ ತಾಲ್ಲೂಕು ತಿಪ್ಪಯ್ಯನಕೋಟೆ ಬಾಲಪ್ಪ ಎಂಬುವರಿಗೆ ತಳಕು ಶಾಖೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನವರು ಸಾಲ ವಸೂಲಿಗೆ ನೋಟೀಸ್ ನೀಡಿ ಸಾಲ ವಸೂಲಿಗೆ ನೋಟೀಸ್ ಕೊಟ್ಟು ಹೆದರಿಸುತ್ತಾರೆ. ಇಂತಹ ವಸೂಲಿ ಕ್ರಮವನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ. ರಾಜ್ಯ ಮತ್ತು ಜಿಲ್ಲೆಯಲ್ಲಿ ಬ್ಯಾಂಕ್‌ಗಳು ವಸೂಲಾತಿಯನ್ನು ನಿಲ್ಲಿಸಬೇಕು, ಬರಗಾಲದಿಂದ ಬೆಳೆ ಕಳೆದುಕೊಂಡು ಸಾಲದಿಂದ ತತ್ತರಿಸಿರುವ ರೈತರ ನೆರವಿಗೆ ಬ್ಯಾಂಕ್‌ಗಳು ದಾವಿಸಬೇಕು, ಸಾಲ ವಸೂಲಾತಿ ನಿಲ್ಲಿಸಿ ಹೊಸ ಸಾಲ ನೀಡಿ, ರೈತರಿಗೆ ಚೈತನ್ಯ ತುಂಬಬೇಕೆAದು ಬ್ಯಾಂಕ್‌ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳು, ಲೀಡ್ ಬ್ಯಾಂಕ್‌ಗಳ ಮೂಲಕ ಸರ್ಕಾರ ಸಾಲ ವಸೂಲಿ ನಿಲ್ಲಿಸಬೇಕೆಂದು ಕಟ್ಟು ನಿಟ್ಟಿನ ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ರೈತರ ಹಕ್ಕೊತ್ತಾಯಗಳು.
ರೈತರು ಬರಗಾಲದಿಂದ ಬೆಳೆ ಕಳೆದು ಕೊಂಡು ಹಾಕಿರುವ ಬಂಡವಾಳವು ಕೈ ಸೇರದೇ ತೀವ್ರ ಸಂಕಷ್ಟದಲ್ಲಿದ್ದು ಬ್ಯಾಂಕ್ ಸಾಲ ವಸೂಲಾಯಿತಿ ನಿಲ್ಲಿಸಬೇಕು, ಲೀಡ್ ಬ್ಯಾಂಕ್ ಮೂಲಕ ಸರ್ಕಾರಿ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ವಸೂಲಾಯಿತಿ ನಿಲ್ಲಿಸುವಂತೆ ಆದೇಶಿಸಬೇಕು, ರೈತರು ಪುನರ್ ಚೇತನಕ್ಕೆ ಬ್ಯಾಂಕ್‌ಗಳು ಹೊಸ ಸಾಲ ನೀಡÀಬೇಕು.
ಹಳ್ಳಿಗಳಲ್ಲಿ ದುಡ್ಡಿಲ್ಲ ವಸೂಲಿ ನಿಲ್ಲಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ಯಾಂಕ್‌ಗಳಿಗೆ ಆದೇಶಿಸಬೇಕು. ಬ್ಯಾಂಕ್‌ಗಳು ಬ್ರಿಟಿಷ್ ನೀತಿ ತೋರುತ್ತಿದ್ದು, ಬಂಡವಾಳ ಶಾಹಿಗಳಿಗೆ ನೀಡಿರುವ ಲಕ್ಷಾಂತರ ಕೋಟಿ ಸಾಲವನ್ನು ವಸೂಲಿ ಮಾಡದ ಬ್ಯಾಂಕ್‌ಗಳು ಹತ್ತು, ಇಪ್ಪತ್ತು ಸಾವಿರ ವಸೂಲಿಗೆ ರೈತರ ಮಾನ ಹರಾಜು ಹಾಕುವ ಮೂಲಕ ಸಾಲ ವಸೂಲಿಗೆ ಕೈ ಹಾಕಿವೆ ಇಂತಹ ಬ್ಯಾಂಕ್ ಪ್ರಯತ್ನಕ್ಕೆ ತೀವ್ರ ಪ್ರತಿಭಟನೆ ರೈತರಿಂದ ಹೆದಲಿಸಬೇಕಾಗುತ್ತದೆ. ಬರಗಾಲ ಬಂದಾಗ ಬ್ಯಾಂಕ್‌ಗಳು ರೈತಲಂದ ಸಾಲ ವಸೂಲಾತಿ ನಿಲ್ಲಿಸಬೇಕೆಂದು ಲೀಡ್ ಬ್ಯಾಂಕ್ ಆದೇಶವಿದ್ದರೂ, ವಸೂಲಿಗೆ ನೋಟೀಸ್ ನೀಡಿ ಕಿರುಕುಳ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈದೇ ಸಂಧರ್ಭದಲ್ಲಿ ಮಂಜುನಾಥ್, ಪಾಪಣ್ಣ, ಹನುಮಂತಯ್ಯ, ಕನಕಶೀವಮೂರ್ತಿ, ಬಾಲಪ್ಪ, ತಿಪ್ಪೆಸ್ವಾಮಿ, ನಾಗರಾಜ್, ಕೃಷ್ಣಮೂರ್ತಿ, ಇತರರು ಇದ್ದರು.

About The Author

Namma Challakere Local News
error: Content is protected !!