ಚಳ್ಳಕೆರೆ : ಸಾರ್ವಜನಿಕರ ಹಿತ ಸಕ್ತಿಯಿಂದ ತಾಲೂಕು ಆಡಳಿತ ಹಾಲಿ ಇರುವ ಗ್ರಾಮದಲ್ಲಿ ಹೊಂದಿಕೊAಡಿರುವ ಮಜಿರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಕಂದಾಯ ವಿಷಯಗಳಿಗೆ ಸಂಬAದಿಸಿದAತೆ ವಿಂಗಡಣೆ ಮಾಡಿ ಕಳೆದ ದಿನಗಳಲ್ಲಿ ತಾಲೂಕು ಆಡಳಿತ, ತಾಲೂಕಿನ ಸುಮಾರು 42 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪಟ್ಟಿ ಸಿಲ್ಲಿಸಿತ್ತು, ಇರದಿಂದ ಸರಕಾರ ಸ್ಪಂಧಿಸಿ ಸುಮಾರು 39 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇನ್ನೂ ಕೇವಲ ಮೂರು ಗ್ರಾಮಗಳನ್ನು ಕಂದಾಯ ಗ್ರಾಮಗಳ ಅರ್ಹತೆಗೆ ಒಳಪಡದೆ ಇರುವ ಕಾರಣ ಕೈಬಿಟ್ಟರುವ ಮಜಿರೆ ಗ್ರಾಮಗಳಾದ ಪರುಶುರಾಂಪುರ ಹುರುಳಿಕಟ್ಟೆ, ಓಬನಹಳ್ಳಿ ಬೋವಿಕಾಲೋನಿ, ಚಳ್ಳಕೆರೆ ನಗರದ ವ್ಯಾಪ್ತಿಯ ನಗರಂಗೆರೆಯನ್ನು ಕಂದಾಯ ಗ್ರಾಮದಿಂದ ಕೈ ಬಿಡಲಾಗಿದೆ.
ಇನ್ನೂ ಕಂದಾಯ ಗ್ರಾಮ ನಮಗೆ ಬೇಡ ಎನ್ನುವ ಸಾರ್ವಜನಿಕರ ಅಭಿಪ್ರಾಯಕ್ಕೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಗೊಲ್ಲಹಳ್ಳಿ ಮಜರೆ ಗ್ರಾಮ ಎನ್.ಉಪ್ಪಾರಹಟ್ಟಿ ಕಂದಾಯ ಗ್ರಾಮದ ಜನಾಭಿಪ್ರಾಯವನ್ನು ಅವಲೋಕಿಸುವ ಬಗ್ಗೆ ಚಳ್ಳಕೆರೆ ತಾಲ್ಲೂಕಿನ ತಹಸೀಲ್ದಾರ್ ರೇಹಾನ್ ಪಾಷ, ಭೂ ದಾಖಲೆಗಳ ಸಹಾಯಕ ನಿದೇರ್ಶಕರಾದ ಗಂಗಪ್ಪ, ಸರ್ವೇ ಅಧಿಕಾರಿ ಬಾಬುರೆಡ್ಡಿ, ರಾಜಸ್ವ ನಿರೀಕ್ಷಕರಾದ ಚೇತನ್ ಕುಮಾರ್, ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಸಾರ್ವಜನಿಕರಿಗೆ ಕಂದಾಯ ಗ್ರಾಮದಿಂದ ಆಗುವ ಅನುಕೂಲಗಳನ್ನು ತಹಶೀಲ್ದಾರ್ ರೇಹಾನ್‌ಪಾಷ ಸಾರ್ವಜನಿಕರ ಮುಂದೆ ತಿಳಿಸಿದರು.
ಇನ್ನೂ ತಹಶೀಲ್ದಾರ್ ರೆಹಾನ್ ಪಾಷ ಮಾಧ್ಯಮದೊಂದಿಗೆ ಮಾತನಾಡಿ, ಈಗಾಲೇ ಸರಕಾರ ಕಂದಾಯ ಗ್ರಾಮವೆಂದು ನಾಯಕನಹಟ್ಟಿ ಹೋಬಳಿ ಗೊಲ್ಲಹಳ್ಳಿ ಮಜರೆ ಗ್ರಾಮ ಎನ್.ಉಪ್ಪಾರಹಟ್ಟಿಯನ್ನು ಕಂದಾಯ ಗ್ರಾಮದ ಸೂಚಿಸಿದೆ ಆದ್ದರಿಂದ ಸ್ಥಳ ಪರೀಶಿಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಇಲ್ಲಿನ ವಾಸ್ತವತೆ ಬಗ್ಗೆ ತಿಳಿಸಲಾಗುವುದು ನಂತರ ಜಿಲ್ಲಾಧಿಕಾರಿಗಳ ಇದರ ಬಗ್ಗೆ ಸೂಚಿಸುತ್ತಾರೆ, ಒಂದು ಕಂದಾಯ ಗ್ರಾಮ ಮಾಡಲು ಒಂದು ಗ್ರಾಮದಿಂದ ಒಂದು ಕಿಲೋ ಮೀಟರ್ ಗಿಂತ ಹೆಚ್ಚಿಗೆ ಇರಬೇಕು ಇನ್ನೂ ಕನಿಷ್ಠ 50 ಮನೆಗಳು ಇರಬೇಕು ಸುಮಾರು 250 ಜನರು ವಾಸಿಸುವಂತ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿ ಅನುಮೊಧಿಸಲಾಗುವುದು ಒಟ್ಟಾರೆ ತಾಲೂಕಿನಲ್ಲಿ 39 ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದರು.

Namma Challakere Local News

You missed

error: Content is protected !!