ಭಾವಪೂರ್ಣ ಸಂತಾಪಗಳು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಂದನಹಳ್ಳಿಯ (ಕುರುಡಿಹಳ್ಳಿ) ಬಂಜಾರ ಸಮಾಜದ ಧರ್ಮ ಗುರುಗಳಾದ ಪರಮಪೂಜ್ಯ ಶ್ರೀ ಶಿವಸಾಧು ಮಹಾರಾಜರು ಅನಾರೋಗ್ಯ ನಿಮಿತ್ತ ಇಂದು ಸಾಯಂಕಾಲ ಅಸ್ತಂಗತರಾಗಿರುತ್ತಾರೆ.
ಸುಮಾರು 30 ವರ್ಷಗಳಿಂದ ಬಂಜಾರ ಧರ್ಮ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡು ಮಠದಲ್ಲಿ ನಿತ್ಯ ದಾಸೋಹ,ಗೋಶಾಲೆ, ಬಡ ಮಕ್ಕಳಿಗೆ ಶಿಕ್ಷಣ ಇನ್ನಿತರೆ ಸೇವಾ ಕಾರ್ಯಗಳನ್ನು ಯಾವುದೇ ರೀತಿಯ ಪ್ರಚಾರ ಹಾಗೂ ಫಲಾಪೇಕ್ಷೆ ಇಲ್ಲದೆ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದರು.
ಪೂಜ್ಯರ ಅಗಲಿಕೆಯು ಇಡೀ ಬಂಜಾರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಪೂಜ್ಯರ ದಿವ್ಯಾತ್ಮಕ್ಕೆ ಶಾಂತಿ ಕೋರುತ್ತಾ ನಾಳೆಯ ದಿನ(24/11/2023) ಮಠದ ಆವರಣದಲ್ಲಿ ಭಕ್ತಾದಿಗಳಿಗೆ ಅಂತಿಮ ದರುಶನವಿದ್ದು ಮಧ್ಯಾಹ್ನ 1.30 ಕ್ಕೆ ಬಂಜಾರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.
ಸಮಸ್ತ ಭಕ್ತಾದಿಗಳು, ಬಂಧು ಮಿತ್ರರು,ಸಮಾಜ ಬಾಂಧವರು ಭಾಗವಹಿಸಿ ಪೂಜ್ಯರ ಆತ್ಮಕ್ಕೆ ಚಿರಶಾಂತಿ ಕೋರಬೇಕೆಂದು ಕೇಳಿಕೊಳ್ಳುತ್ತೇನೆ…
ಸಂಪರ್ಕಿಸಿ
ಪುರುಷೋತ್ತಮ ನಾಯ್ಕ
9108121494
ಕುಮಾರ್ ನಾಯ್ಕ
9845131687