ಚಳ್ಳಕೆರೆ : ಅನ್ನಭಾಗ್ಯ ಯೋಜನೆಗೆ ಕತ್ತರಿ ಎಂಬ ತಲೆಬರಹದಡಿಯಲ್ಲಿ ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಂದು ಮುಂಜಾನೆ ತಾಲೂಕಿನ ನನ್ನಿವಾಳ ಗ್ರಾಮಕ್ಕೆ ಬೇಟಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಸೊಸೈಟಿ ಮಾಲೀಕರಿಗೆ ತರಾಟೆ ತೆಗೆದುಕೊಂಡು ಅಕ್ಕಿ ವಿತರಣೆಯಲ್ಲಿ ಲೋಪ ಕಂಡುಬಂದರೆ ಕೂಡಲೇ ನಿಮ್ಮ ಪರವಾನಿಗೆ ರದ್ದು ಪಡಿಸಲಾಗುವುದು ಖಡಕ್ ಹೆಚ್ಚರಿಕೆ ನೀಡಿದ್ದಾರೆ
ಪಡಿತರ ಅಕ್ಕಿಗಾಗಿ ಮುಂಜಾನೆ 3 ಗಂಟೆಯಿಂದ ಕಾಯಬೇಕಾದ ಅನಿರ್ವಾಯ ಏನಿದೆ ತಿಂಗಳ ಪೂರ್ತಿ ವಿತರಣೆ ಮಾಡಬೇಕಾದ ಕರ್ತವ್ಯ ನಿಮ್ಮದು ಕೂಲಿ ಬಿಟ್ಟು ನಿಮ್ಮ ಸೋಸೈಟಿ ಹತ್ತಿರ ಮಹಿಳೆಯರು ಮತ್ತೊಮ್ಮೆ ಕಾಯಬಾರದು ಇನ್ನೂ ತೂಕದಲ್ಲಿ ವ್ಯತ್ಯಾಸ ಹಾಗದಂತೆ ಅಕ್ಕಿ ವಿತರಣೆ ಮಾಡಬೇಕು ಎಂದರು.
ಇನ್ನೂ ಸ್ಥಳದಲ್ಲಿ ಇದ್ದ ಮಹಿಳೆರು ಸ್ವಾಮಿ ನಮಗೆ ಮೂರು ತಿಂಗಳಿನಿಂದ ರೆಷನ್ ಕೊಟ್ಟಿಲ್ಲ ಎಂದು ಇಓ ಗಮನ ಸೆಳೆದಾಗ ಇಓ ಲೆಕ್ಕಾ ಪತ್ರಗಳನ್ನು ಪರೀಶಿಲಿಸಿ ಮೂರು ತಿಂಗಳಿನಿಂದ ಅಕ್ಕಿ ಕೊಡದೆಇರುವ ಕುಟುಂಬಕ್ಕೆ ಮೊದಲ ಅಕ್ಕಿ ನೀಡಿ ಎಂದರು.
ಇನ್ನೂ ಸ್ಥಳದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಸಂಪತ್ ಕುಮಾರ್, ಪಿಡಿಓ ಇನಾಯಿತ್ ಬಾಷ್ ಹಾಗೂ ಸಾರ್ವಜನಿಕರು ಇದ್ದರು.