ಹೊಸದುರ್ಗ:
ದೇಶದಲ್ಲಿ ಶೇ 80 ರಷ್ಟು ಮೌಡ್ಯತೆಯಿಂದ ತುಂಬಿ ತುಳುಕುತ್ತಿದೆ. ಮೊದಲು ನಾವು ಜ್ಞಾನವಂತರಾಗಿ ಸಮಾಜದ ಪಿಡುಗುಗಳನ್ನು ತೊಡೆದು ಹಾಕಿದರೆ ಸುಜ್ಞಾನದ ದಾರಿ ದೊರೆಯುತ್ತದೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಹೆಚ್ ಬಿಲ್ಲಪ್ಪ ರವರು ತಿಳಿಸಿದರು.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು ಸಮಾಜದಲ್ಲಿ ಅಸ್ಪಶ್ಯತೆ ಮೌಡ್ಯತೆ ತುಂಬಿ ತುಳುಕುತಿದೆ ಇವುಗಳನ್ನೆಲ್ಲ ಹೋಗಲಾಡಿಸಲು ನಾವು ಜ್ಞಾನದ ಕಡೆಗೆ ಹೋಗುವುದು ಅತ್ಯಂತ ಅವಶ್ಯಕ ಎಲ್ಲಿ ಜ್ಞಾನ ಅರಿವು ಇರುತ್ತದೋ ಅಲ್ಲಿ ಸುಜ್ಞಾನದ ಹಾದಿ ಹಸನಾಗಿರುತ್ತದೆ ಎಂದರು.
ದೇಶದಲ್ಲಿ ಪೋಕ್ಸೋ ಕಾಯ್ದೆ ಬರದೇ ಇದ್ದಿದ್ದರೆ ಅದೆಷ್ಟು ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು ಭಾರತ ಸಂವಿಧಾನದ ಅಡಿಯಲ್ಲಿ ಪೋಕ್ಸೋ ಕಾಯ್ದೆ ವಿಶೇಷ ಸ್ಥಾನಮಾನವನ್ನು ನೀಡಿ ಮಕ್ಕಳ ಅಭಿವೃದ್ಧಿಗೆ ಸಹಕಾರ ನೀಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಪ್ಪಿಸುವ ಸಲುವಾಗಿ ಕಾನೂನನ್ನು ಮಾಡಲಾಗಿದೆ ಅಂತಹ ಕಾನೂನಿನ ಭದ್ರತೆಯಿಂದಲೇ ಮಕ್ಕಳಿಗೆ ನ್ಯಾಯ ದೊರಕುತ್ತಿದೆ ಎಂದರು.
ಭಾರತ ದೇಶದ ಸಂವಿಧಾನ ಒಂದು ಧರ್ಮವಾದರೆ ಅದನ್ನು ನಾವು ಅನುಸರಿಸಿ ಬದುಕಿದರೆ ಉತ್ತಮ ಸಮಾಜವನ್ನು ಕಟ್ಟಬಹುದು, ನಮ್ಮ ನಡವಳಿಕೆಗಳು ಚೆನ್ನಾಗಿದ್ದರೆ ನಮ್ಮ ಹೆಸರು ಕೂಡ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ಹೆಸರು ದೇಶದ ಪುಟ್ಟಗಳಲ್ಲಿ ಉಳಿಯಬೇಕಾದರೆ ಉತ್ತಮ ಸಾಧನೆಗಳ ಮೂಲಕ ನಮ್ಮ ಹೆಸರುಗಳನ್ನು ನಾವು ಉನ್ನತ ಮಟ್ಟದಲ್ಲಿ ಕಾಣಬಹುದು ಎಂದು ತಿಳಿಸಿದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ನಮ್ಮ ನಡೆಯಿಂದಲೇ ನಮ್ಮ ಮೌಲ್ಯವು ಕೂಡ ಹೆಚ್ಚಾಗುತ್ತದೆ ವಿನಹ ನಮ್ಮ ಹಣ ಐಶ್ವರ್ಯದಿಂದಲ್ಲ ಆ ಒಂದು ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಅಸನಾದ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಬಸವರಾಜ್ ವಿದ್ಯಾರ್ಥಿಗಳಿಗಾಗಿ ಟ್ರಾಫಿಕ್ ನಿಯಮಾವಳಿಗಳ ಕುರಿತು ಮಾತನಾಡಿ ಇವತ್ತಿನ ಯುಗದಲ್ಲಿ ಯುವಕರು ಅತಿ ಹೆಚ್ಚಾಗಿ ಬೈಕ್ ವೀಲಿಂಗ್ ಮಾಡುವುದರ ಮೂಲಕ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ ಅಂತಹ ಅಪಾಯಕಾರಿ ಆಟಗಳನಾಡುವುದನ್ನು ನಿಲ್ಲಿಸಬೇಕು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸಿದರೆ ನಮ್ಮ ಪ್ರಾಣಕ್ಕೆ ಆಪತ್ತು ಎದುರಾಗುತ್ತದೆ ಎಂದು ತಿಳಿಸಿದರು.
ಮಧ್ಯ ವಾಸನೆಯ ಮಾಡಿಕೊಂಡು ವಾಹನಗಳನ್ನು ಚಲಾಯಿಸುವುದು ಕಾನೂನು ಅಪರಾಧ ಮೊಬೈಲ್ ಬಳಸಿಕೊಂಡು ದ್ವಿಚಕ್ರ ವಾಹನಗಳು ಚಲಾಯಿಸುವುದು ಪ್ರಾಣಕ್ಕೆ ಆಪತ್ತು ತಂದಂತೆ ಇದರ ಜೊತೆಗೆ ಫ್ಯಾಷನ್ ಅಭಿವೃದ್ಧಿಗಾಗಿ ಬೈಕಿನಲ್ಲಿ ಸಿಗರೇಟ್ ಸೇರಿಕೊಂಡು ಓಡಾಡುವುದು ಅಪಾಯಕ್ಕೆ ಆಹ್ವಾನ ಮಾಡಿಕೊಟ್ಟಂತೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಯಥೇಚ್ಛವಾಗಿ ಪೋಷಕರು ಮಕ್ಕಳಿಗಾಗಿ ದುಬಾರಿ ಬೆಳೆಯ ಬೈಕುಗಳನ್ನು ಕೊಡಿಸುತ್ತಿದ್ದಾರೆ ಆದರೆ ಅವರ ಅತಿಯಾದ ವೇಗದಿಂದ ಅವರ ಪ್ರಾಣಕ್ಕೆ ಗೊತ್ತಾಗುತ್ತದೆ ಎಂಬುದು ಕೂಡ ಪೋಷಕರು ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಕೌಶಲ್ಯ ತರಬೇತಿ ವಿಚಾರ ಕುರಿತು ಎಂ ಕೆ ಹರೀಶ್ ಅವರು ಮಾತನಾಡಿ ಯುವ ಸಮುದಾಯ ದೇಶದಲ್ಲಿ ತನ್ನದೇ ಆದ ಶಕ್ತಿಯನ್ನು ಹೊಂದಿದೆ ಆದರೆ ಪ್ರಸ್ತುತ ದಿನಮಾನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುವುದರ ಮೂಲಕ ತಮ್ಮ ಸಾವುಗಳನ್ನು ಸಮೀಪ ಮಾಡಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಯ ಜೀವನದಲ್ಲಿ ಕ್ರೀಡೆ ಸಾಹಿತ್ಯ ಜಾನಪದ ಇತರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವ ಬದಲಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ವಿಚಾರವಾಗಿದೆ ಸರ್ಕಾರದಿಂದ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ದುಶ್ಚಟಗಳು ನಿಯಂತ್ರಣ ಕುರಿತು ಎಷ್ಟೇ ಕಾರ್ಯಕ್ರಮಗಳು ಮಾಡಿದರೆ ಸಹ ನಿಯಂತ್ರಣಕ್ಕೆ ಬಾರದೆ ಇರುವುದು ಶೋಚನೀಯ, ಯುವ ಸಮುದಾಯ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ ಇವುಗಳಿಂದ ಹೊರಬರಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆ ಒಂದು ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆಗಳಲ್ಲಿ ತೊಡಗಿಕೊಂಡರೆ ದುಶ್ಚಟಗಳ ನಿಯಂತ್ರಣವನ್ನು ಮಾಡಬಹುದು ಎಂದರು.
ಹಿರಿಯ ಪತ್ರಕರ್ತರಾದ ಸಿಎನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳ ಜೀವನವು ಅಮೂಲ್ಯವಾದ ಜೀವನ ಅಷ್ಟೇ ಉಪಯುಕ್ತ ಮೌಲ್ಯಧಾರಿತ ಸಮಯವಾಗಿದೆ ಸಮಯವನ್ನು ಕಾಯುವ ತಾಳ್ಮೆ ಯಾರಿಗೆ ಇರುತ್ತದೆ ಅಂತ ವ್ಯಕ್ತಿ ದೇಶದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾನೆ ಸಮಯಕ್ಕೆ ಹೆಚ್ಚಿನ ಬೆಲೆಯನ್ನು ನೀಡಿದರೆ ಯಶಸ್ಸು ತಾನಾಗಿಯೇ ಸಿಗುತ್ತದೆ ಎಂದು ಹೇಳಿದರು.
ಅರೆಯ ವಯಸ್ಸಿನಲ್ಲಿ ಬೇರೆ ಕಡೆಗೆ ಗಮನ ಹರಿಸದೆ ವ್ಯಾಸಂಗದ ಕಡೆ ಗಮನ ಹರಿಸಿದರೆ ಉತ್ತಮ ಮಟ್ಟದಲ್ಲಿ ಹೆಸರು ಮಾಡಲು ಸಹಕಾರಿಯಾಗಲಿದೆ ಆ ಒಂದು ನಿಟ್ಟಿನಲ್ಲಿ ಯುವಕ ಯುವತಿಯರು ದೇಶ ಕಟ್ಟುವಂತಹ ಕೆಲಸ ಮಾಡಬೇಕಾಗಿದೆ ಎಂದರು.
ಕೋಟ್: ಭಾರತ ದೇಶದ ಸಂವಿಧಾನ ನಮ್ಮ ಧರ್ಮ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಹಾಗಾಗಿ ಸಂವಿಧಾನವನ್ನು ಗೌರವಿಸೋಣ ಆರಾಧಿಸೋಣ ಎಂದರು.
*ಹೈ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಹೆಚ್ ಬಿಲ್ಲಪ್ಪ
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭ್ರಮರಾಂಬ, ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕುಮಾರಸ್ವಾಮಿ, ಉಪಾಧ್ಯಕ್ಷರಾದ ಕಿರಣ್ ಕಾರ್ಯದರ್ಶಿ ಆನಂದ್.ಡಿ, ನಿರ್ದೇಶಕರುಗಳಾದ ಪ್ರದೀಪ್ ದ್ಯಾಮ ಕುಮಾರ್, ಪ್ರವೀಣ್, ಅಭಿಷೇಕ್, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು