ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಮತ್ಸಮುದ್ರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಬಳಿ ಕಟಿಂಗ್ ಶಾಪ್ ಇರುವುದರಿಂದ ಪಕ್ಕದಲ್ಲೆ ಇರುವ ಶಾಲಾ ಮಕ್ಕಳ ಅಡುಗೆ ಕೋಣೆಗೆ ಕೂದಲು ಗಾಲಿಗೆ ಬಂದು ಬಿಳುತ್ತಿವೆ ಇದರಿಂದ ಬಿಸಿಯೂಟದಲ್ಲಿ ತಲೆಕೂದಲು ಬಿಳುತ್ತಿವೆ ಎಂದು ಶಾಲಾ ಮುಖ್ಯ ಶಿಕ್ಷರು, ಎಸಿಡಿಎಂಸಿ ಹಾಗೂ ಗ್ರಾಪಂ. ಅಭಿವೃದ್ಧಿ ಅಧಿಕಾರಿಗಳು ಬೆರೆಡೆಗೆ ಬದಲಾಯಿಸಲು ಪತ್ರ ರವಾನೆ ಮಾಡಿದ್ದಾರೆ.
ಆದರೆ ಅದ್ಯಕೋ ಪೆಟ್ಟಿಗೆಅಂಗಡಿ ಬೆರೆಡೆ ವರ್ಗಾವಣೆ ಮಾಡಿದಂತೆ ಕಾಣುತ್ತಿಲ್ಲ. ಇನ್ನೂ ಈ ಶಾಲಾ ಕಾಂಪೌಂಡ್ ಮೇಲೆ ಕುಳಿತು ಕೆಲ ಯುವಕರು ಸೀಗರೇಟ್ ಹಾಗೂ ಗುಟ್ಕಸೇವಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದರಿಂದ ಮಕ್ಕಳ
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಶಾಲಾ ಅವಧಿಯಲ್ಲಿ ಕಟಿಂಗ್ ಶಾಪ್ ಗೆ ಬಂದ ಯುವಕರು ಶಾಲಾ ಕಾಂಪೌಂಡ್ ಗೋಡೆ ಮೇಲೆ ಕುಳಿತು ಮೊಬೈಲ್ ನಲ್ಲಿ ಹಾಡು ಹಾಕಿ ಶಬ್ದಮಾಲಿನ್ಯ ದಿಂದ ಮಕ್ಕಳ ಕಲಿಕೆ ಮೇಲೆ ದುಷ್ಟಪರಿಣಾಮ ಬೀರುತ್ತಾದೆ ಇದರಿಂದ ಪೋಷಕರು ಮತ್ತು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.