ನವೆಂಬರ್ ಒಂದರಂದು ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಚಳ್ಳಕೆರೆ ನಗರದ ಕಲಾವಿದರಾದ ಪಿ.ತಿಪ್ಪೇಸ್ವಾಮಿ ರವರನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅವರ ಸ್ವ ಗೃಹದಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪ್ರಹ್ಲಾದ್, ಭರಮಯ್ಯ, ಶ್ರೀನಿವಾಸ್, ಮಲ್ಲೇಶಪ್ಪ, ದಳವಾಯಿ ಮೂರ್ತಿ, ಅಪ್ಪಣ್ಣ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.