ಜಿಲ್ಲಾ ಮಟ್ಟದ ಕನ್ನಡ ರಾಜ್ಯೊತ್ಸವ ಪ್ರಶಸ್ತಿಗೆ ಬಾಜನರಾದ ಡಾ.ಬಿ ಚಂದ್ರನಾಯ್ಕ್
ಚಳ್ಳಕೆರೆ : ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವೈಧ್ಯಕೀಯ ಸೇವೆಯಲ್ಲಿ ಆಯ್ಕೆಯಾದ ಚಳ್ಳಕೆರೆ ತಾಲೂಕಿನ ಮಕ್ಕಳ ತಜ್ಞರಾದ ಡಾ.ಬಿ ಚಂದ್ರನಾಯ್ಕ ರವರಿಗೆ ತಾಲೂಕಿನ ಜನತೆ ಅಭಿನಂಧಿಸಿದ್ದಾರೆ.
ಅದರಂತೆ ಕಳೆದ ಹಲವು ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಸಾವಿರಾರು ಬಡ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಜನ ಮೆಚ್ಚುಗೆ ಪಡೆದ ಡಾಕ್ಟರ್ ಇವರಾಗಿದ್ದಾರೆ.
ಇನ್ನೂ ಮಹಾಮಾರಿ ಕೊವಿಡ್ ನಂತಹ ಸಂಧರ್ಭದಲ್ಲಿ ನೂರಾರು ಜೀವಗಳನ್ನು ಉಳಿಸಿ ಕುಟುಂಬಗಳ ಆಶ್ರಯ ಕಲ್ಪಿಸಿದ ಕಿರ್ತಿ ಇವರಿಗೆ ಸಲ್ಲುತ್ತದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಡಾ.ಬಿ ಚಂದ್ರನಾಯ್ಕ್ ರವರಿಗೆ ರಾಧ ಡೆವಲಪರ್ಸ್ ನ ಮಾಲೀಕರಾದ ಅಣ್ಣಪ್ಪ ಹಾಗೂ ಸಿಪಿಎಸ್ ಗ್ರೂಪ್ಸ್ ನ ಮಾಲೀಕರಾದ ಡಾ.ಸಂತೋಷ ಸಿ.ನಾಯ್ಕ್ ರವರು ಶುಭಾಷಯಗಳು ಕೊರಿದ್ದಾರೆ