ಚಳ್ಳಕೆರೆ : ತಾಲೂಕಿನ ಬೇಡರೆಡ್ಡಿಹಳ್ಳಿ ಭಾಗದ ಹಲವು ರೈತರ ಜಮೀನುಗಳಲ್ಲಿ ದೇವರ ಹಸುವೊಂದು ಬೆಳೆ ಹಾನಿ ಮಾಡುತ್ತಿದೆ ಇನ್ನೂ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ, ರೇಷ್ಮೇ, ಈರುಳ್ಳಿ ಇಗೇ ಹಲವು ಬೆಳೆಗಳ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ, ಇನ್ನೂ ಕಟ್ಟಿ ಹಾಕಲು ಹೋದ ರೈತರ ಮೇಲೆ ಇರಿಯಲು ಎತ್ನಿಸುತ್ತದೆ ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ತಹಶಿಲ್ದಾರ್ ರೇಹಾನ್ ಪಾಷ ಗೆ ಮನವಿ ನೀಡಿದರು.
ಇನ್ನೂ ನಗರದ ತಾಲೂಕು ಕಛೇರಿಗೆ ನೂರಾರು ರೈತರೊಟ್ಟಿಗೆ ಆಗಮಿಸುದ ಅವರು ದೇವರ ಹಸುವನ್ನು ಬೇರೆಡೆ ವರ್ಗಾಹಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂಧಿಸಿದ ತಹಶೀಲ್ದಾರ್ ರೇಹಾನ್ ಪಾಷ ರವರು ಪಶು ಇಲಾಖೆಯೊಟ್ಟಿಗೆ ಮತನಾಡಿ ನಿಮ್ಮ ಸಮಸ್ಯೆ ತಿಳಿಗೊಳಿಸಲಾಗುವುದು ಎಂದು ಪಶು ಇಲಾಖೆ ಸಹಾಯಕ ನಿದೇರ್ಶಕ ಡಾ.ರೇವಣ್ಣರವರಿಗೆ ಸೂಚನೆ ನೀಡಿದರು.
ಈದೇ ಸಂಧರ್ಭದಲ್ಲಿ ವಲಸೆ ತಿಪ್ಪೆಸ್ವಾಮಿ, ರಾಜಣ್ಣ, ಹೊನ್ನುರು ಮಾರಣ್ಣ, ರುದ್ರಮುನಿ, ಚಂದ್ರಶೇಖರ್, ಗಂಗಾಧರ್, ಹನುಮಂತರೆಡ್ಡಿ, ಶ್ರೀನಿವಾಸ್, ತಿಪ್ಪೆಸ್ವಾಮಿ, ಇತರರು ಇದ್ದರು.

About The Author

Namma Challakere Local News
error: Content is protected !!