ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಮುಗ್ದ ಜನರು ಮೂಡನಂಬಿಕೆಯAತಹ ಅಸ್ತçಕ್ಕೆ ಜಾಸ್ತಿ ಮಾರುಹೊಗುತ್ತಾರೆ, ಇಂತಹ ಮುಗ್ದ ಜನರಿಗೆ ವೈಜ್ಞಾನಿಕ ಚಿಂತನೆ ಬಹಲ ಮುಖ್ಯವಾಗಿದೆ ಎಂದು ಮೊಳಕಾಲ್ಮೂರು ಕಾಲೇಜಿನ ಪ್ರಾಚಾರ್ಯರಾದ ಗೋವಿಂದಪ್ಪ ಹೇಳಿದರು.
ಅವರು ತಾಲೂಕಿನ ದೊಡ್ಡೆರಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಳ್ಳಿಯಲ್ಲಿ ಹೊಟ್ಟೆಉರಿ, ಕಿತ್ತಾಟ, ಅಸೂಯೆ, ಪ್ರೀತಿ ಎಲ್ಲವೂ ತುಂಬಿದೆ, ಮೂಡನಂಬಿಕೆಗಳ ಗೂಡಾಗಿದೆ, ಇನ್ನೂ ಹಳ್ಳಿಯ ಜನ ದೇವರು ಧರ್ಮಕ್ಕೆ ಹೆದರುತ್ತಾರೆ ವೈಜ್ಞಾನಿಕ ಚಿಂತನೆ ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇನ್ನೂ ವಿಶೇಷ ಆಹ್ವಾನಿತರಾದ ಕಾಟಪ್ಪನವರ ತಿಪ್ಪೇಸ್ವಾಮಿ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಹಾಸ್ಯದ ಮೂಲಕ ಗ್ರಾಮಸ್ಥರಿಗೆ ಹಾಗೂ ಶಿಬಿರಾರ್ಥಿಗಳಿಗೆ ಮನೋರಂಜನೆ ಮೂಲಕ ಮನ ಮುಟ್ಟುವಂತೆ ತಿಳಿಸಿದರು.
ಕನ್ನಡ ಸೋವಿಯತ್ ಒಕ್ಕೂಟದ ಶಾಲಾ ದತ್ತು ಕಾರ್ಯಕ್ರಮದ, ವ್ಯವಸ್ಥಾಪಕರಾದ ರಾಜೇಶ್ ಮಂಜುನಾಥ್ ಮಾತನಾಡಿ ಡಿ.ಉಪ್ಪಾರಹಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಕೈಲಾದ ಸೇವೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಉಪ್ಪಾರಹಟ್ಟಿ ಗ್ರಾಮಪಂಚಾಯತಿ ಸದಸ್ಯೆ ಶಿಲ್ಪಾ ಶ್ರೀನಿವಾಸ್ ವಹಿಸಿದ್ದರು. ಗುಂಡಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿರಿಗೊಂಡಪ್ಪ, ಶಿವಣ್ಣ ಉಪನ್ಯಾಸಕರಾದ ಇಮ್ರಾನ್, ಸಂಜಯ್ ಉಪಸ್ಥಿತರಿದ್ದರು.