ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಭಕ್ತಿಯ ನಮನ ಸಲ್ಲಿಸಿದ ಗಾಯಕ ಕೆ ಟಿ ಮುತ್ತುರಾಜ್
ಚಳ್ಳಕೆರೆ:: ಪುನೀತ್ ರಾಜಕುಮಾರ್ ರವರ ಮಾನ್ವಿಯ ಮೌಲ್ಯಗಳು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಮಹತ್ವವಾದದ್ದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಹೆಗ್ಗೇರೆ ಮಂಜುನಾಥ್ ಹೇಳಿದ್ದಾರೆ.
ಅವರು ಭಾನುವಾರ ನಗರದ ಬೆಂಗಳೂರು ರಸ್ತೆಯ ಬನಶೀ ವೃದ್ಧಾಶ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಹಾಗೂ ಮುತ್ತುರಾಜ್ ಕಲಾ ಬಳಗ ಚಳ್ಳಕೆರೆ ಇವರ ವತಿಯಿಂದ ಕರ್ನಾಟಕದ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಪುನೀತ್ ರಾಜಕುಮಾರ್ ಅವರು ಉತ್ತಮ ನಟರಾಗಿ ಜೀವನದ ಮೌಲ್ಯಗಳ ಬದುಕನ್ನು ಕುರಿತು ಸಾಕಷ್ಟು ಚಲನಚಿತ್ರಗಳ ನಟಿಸಿದ್ದಾರೆ ತಮ್ಮ ಜೀವನದುದ್ದಕ್ಕೂ ಇಲೆಮರಿ ಕಾಯಿಯಂತೆ ಜೀವನವನ್ನು ನಡೆಸಿ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ ಉಸಿರು ನಿಂತರು ಸಹ ಅವರ ಹೆಸರು ಇಂದು ಶಾಶ್ವತವಾಗಿ ಉಳಿಯಲು ದೇವರ ಸ್ವರೂಪವಾಗಿ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
ಪ್ರಿನ್ಸಿಪಾಲ್ ರಮೇಶ್ ಕುಮಾರ್ ಮಾತನಾಡಿ ಕರ್ನಾಟಕದ ಜನರ ಮನಸ್ಸಿನಲ್ಲಿ ಪುನೀತ್ ರಾಜಕುಮಾರ್ ಅವರ ಕಾರ್ಯ ಸಾಧನೆ ಸಾಮಾಜಿಕ ಸೇವೆ ವಿದ್ಯಾನ ಅನ್ನದಾನ ವೃದ್ಧಾಶ್ರಮ ಸೇರಿದಂತೆ ಪುನೀತ್ ರಾಜಕುಮಾರ್ ಎಂದರೆ ದೇವರ ರೂಪದಲ್ಲಿ ಕಾಣುತ್ತಾರೆ ಇಂದಿನ ಯುವ ಪೀಳಿಗೆ ಪುನೀತ್ ರಾಜಕುಮಾರ್ ರವರ ಮಾನವೀಯ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಜಿ ಪಿ ನವೀನ್ ಕುಮಾರ್, ಪ್ರಿನ್ಸಿಪಾಲ್ ರಮೇಶ್ ಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹೆಗ್ಗೆರೆ ಮಂಜುನಾಥ್, ನಲಗೇತನಹಟ್ಟಿ ಗಾಯಕ ಕೆ ಟಿ ಮುತ್ತುರಾಜ್, ತಾಲೂಕು ವೃದ್ಧಾಶ್ರಮದ ಮುಖ್ಯಸ್ಥರಾದ ಮಂಜುಳಮ್ಮ. ಅಧ್ಯಕ್ಷ ರುದ್ರಮುನಿ ,ಯುವಕವಿ ಜೋಗಿ, ವೃದ್ಧಾಶ್ರಮದ ವೃದ್ಧರು ಇದ್ದರು