ನಾಯಕನಹಟ್ಟಿ:: ವಿಶ್ವಕ್ಕೆ ರಾಮಾಯಣದಂತಹ ಮಹಾ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮುಖಂಡ ಜಿಎಂ ಜಯಣ್ಣ ಹೇಳಿದ್ದಾರೆ.

ಅವರು ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಂತುಕೋಲಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ವಾಲ್ಮೀಕಿ ಯುವಕ ಸಂಘದ ವತಿಯಿಂದ ವಾಲ್ಮೀಕಿ ಜಯಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ.
ಮಹಾಋಷಿ ವಾಲ್ಮೀಕಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಗ್ರಾಮದಲ್ಲಿ ಪ್ರತಿಯೊಬ್ಬ ತಂದೆ ತಾಯಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಂದೆ-ತಾಯಿಗಳ ಆದ್ಯ ಕರ್ತವ್ಯ ಎಂದರು.

ಇದೇ ವೇಳೆ ಜೆಸಿಬಿ ಎನ್ ತಿಪ್ಪೇಸ್ವಾಮಿ ಮಾತಾನಾಡಿ ಪ್ರತಿಯೊಬ್ಬರು ವಾಲ್ಮೀಕಿ ಬೋಧಿಸಿದ ಉಪದೇಶವನ್ನು ಪಾಲಿಸಿದರೆ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ನಮ್ಮ ಗ್ರಾಮದಲ್ಲಿ ಹೆಚ್ಚು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನರ ಸಂಖ್ಯೆ ಹೆಚ್ಚಿದೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ವಾಲ್ಮೀಕಿ ಸಮುದಾಯ ಹೆಚ್ಚು ಅಭಿವೃದ್ಧಿ ಹೊಂದಬೇಕೆಂದರೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಮಹರ್ಷಿ ವಾಲ್ಮೀಕಿ ರಾಮಾಯಣದಂತ ಮಹಾ ಗ್ರಂಥವನ್ನು ನಮಗೆ ನೀಡಿದ್ದಾರೆ ಹಾಗೆ ಬುದ್ಧ ಬಸವ ಡಾ. ಬಿ ಆರ್ ಅಂಬೇಡ್ಕರ್ ರವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ ಅವರ ಕೊಡುಗೆ ಅಪಾರ ಎಂದು ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷ ಬಿ ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯ ಪಟೀಲ್ ಬಿ ಗುಂಡಪ್ಪ, ಊರಿನ ಮುಖಂಡರಾದ ಬಿ ಚಂದ್ರಣ್ಣ, ಮೀಸೆ ಓಬಣ್ಣ, ಗೊಂಚಿಗಾರ್ ಪಾಲಯ್ಯ ,ಪಾಪಣ್ಣ ಹೊಸ ಕಪಿಲೆ ಬೋರಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್. ತಿಪ್ಪೇಸ್ವಾಮಿ (ಜೆಸಿಬಿ) ಕೆ ಟಿ ಮಲ್ಲಿಕಾರ್ಜುನ್, ಬೂಟ್ ತಿಪ್ಪೇಸ್ವಾಮಿ, ನಿವೃತ್ತ ದೈಹಿಕ ಶಿಕ್ಷಕ ಕಾಮಯ್ಯ, ಬೋಸಯ್ಯ, ಪಿಡಿಒ ರಮೇಶ್, ಹುಚ್ಚ ಮಲ್ಲಯ್ಯ, ಪ್ರದೀಪ ರೆಡ್ಡಿ, ಟಿ. ಜಯಣ್ಣ, ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಂಗಾರಪ್ಪ, ವಾಲ್ಮೀಕಿ ಯುವಕ ಸಂಘದ ಸದಸ್ಯರಾದ ಎಂ ಪಿ ಮಲ್ಲಿಕಾರ್ಜುನ್, ಬಿ ಪಾಪಣ್ಣ, ಎಸ್ ಬೋರಯ್ಯ, ಬುಲ್ಲಿ ವೈ ಮಲ್ಲೇಶ್, ಎನ್ಎಸ್ ಗುಂಡ, ಕೆ ಬಿ ಪ್ರಕಾಶ್, ಎಂ ಮಂಜುನಾಥ್,
ರಾಜುಬೋರಯ್ಯ, ಸುರೇಶ್ ಅಂಗನವಾಡಿ ಶಿಕ್ಷಕಿರಾದ ಶ್ರೀದೇವಿ, ಪಾಲಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಗೀತಾ ,ಮತ್ತು ಸಿಬ್ಬಂದಿ ಹಾಗೂ ಗುಂತಕೋಲಮ್ಮನಹಳ್ಳಿ ಗ್ರಾ.ಪಂ ಹಾಲಿ ಮತ್ತು ಮಾಜಿ ಸದಸ್ಯರು ಊರಿನ ಸಮಸ್ತ ಗ್ರಾಮಸ್ಥರು

About The Author

Namma Challakere Local News
error: Content is protected !!