ನಮ್ಮ ಚಳ್ಳಕೆರೆ ನ್ಯೂಸ್ ವರದಿ ನೋಡಿ ಎಚ್ಚೆತ್ತುಕೊಂಡ ಅಧಿಕಾರಿಗಳು ಗುಂತಕೋಲಮ್ಮನಹಳ್ಳಿ ಶುದ್ಧ ನೀರಿನ ಘಟಕವನ್ನು ದುರಸ್ತಿ ಪಡಿಸಿದ ಅಧಿಕಾರಿ ಎಇಇ ದಯಾನಂದ್
ನಾಯಕನಹಟ್ಟಿ:: ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಂತಕೋಲಮ್ಮನಹಳ್ಳಿ ಎರಡು ವರ್ಷದಿಂದ ದುರಸ್ತಿಯಾಗಿದ್ದ ಶುದ್ಧ ನೀರಿನ ಘಟಕವನ್ನು ಗ್ರಾಮಸ್ಥರು ಖಚಿತ ಮಾಹಿತಿಯ ಮೇರೆಗೆ ನಿನ್ನೆ ಶುದ್ದ ನೀರಿನ ಘಟಕವನ್ನು ವರದಿ ಮಾಡಲಾಯಿತು. ಪತ್ರಿಕೆಯಲ್ಲಿ ಸುದ್ದಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚಳ್ಳಕೆರೆ ಎ ಡಬ್ಲ್ಯೂ ದಯಾನಂದ್ ಇಂದು ಗ್ರಾಮಕ್ಕೆ ಆಗಮಿಸಿ ಶುದ್ಧ ನೀರಿನ ಘಟಕವನ್ನು ದುರಸ್ತಿ ಪಡಿಸಿದ್ದಾರೆ. ಹೇಳಿ ಮಾತನಾಡಿದವರು ಮುಂಬರುವ ದಿನಗಳಲ್ಲಿ ಶುದ್ಧ ನೀರಿನ ಘಟಕವನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಅಲ್ಲಿಯವರೆಗೆ ಗ್ರಾಮಸ್ಥರು ಶುದ್ಧ ನೀರಿನ ಘಟಕವನ್ನು ಸ್ವಚ್ಛತೆ ಸೇರಿದಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಎಇಇ ದಯಾನಂದ್, ಗ್ರಾಮಸ್ಥರಾದ ಉಪಾಧ್ಯಕ್ಷ ಬಿ.ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಸಿದ್ದಲಿಂಗಮ್ಮ ಗುಂಡಯ್ಯ, ಗ್ರಾಮಸ್ಥರಾದ ಗಾದ್ರಿಪಾಲಯ್ಯ, ಗೋನೂರು ತಿಪ್ಪೇಸ್ವಾಮಿ, ಸಿದ್ದಣ್ಣ, ಮಲ್ಲಿಕಾರ್ಜುನ್, ಮುಂತಾದವರು ಇದ್ದರು