ಚಳ್ಳಕೆರೆ : ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಸೇರಿ ಅದ್ದೂರಿಯಾಗಿ ಆಚರಿಸುವ ವಾಲ್ಮೀಕಿ ಜಯಂತಿ ಉತ್ಸವ ಚಳ್ಳಕೆರೆಯಲ್ಲಿ ಮೊದಲೆಯದು ಆದ್ದರಿಂಧ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕಾರ್ಯಗಳನ್ನು ಅರಿತು ವಾಲ್ಮೀಕಿಗೆ ಗೌರವ ಸಲ್ಲಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬದಳ ಆಚರಣಾ ಸಮಿತಿ ಹಾಗೂ ಶ್ರೀ ವಾಲ್ಮಿಕಿ ಸಮುದಾಯದಿಂದ ಆಯೋಜಿಸಿದ್ದ ಶ್ರೀ ವಾಲ್ಮಿಕಿ ಜಯಂತಿ ಪೂರ್ವ ಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಡೀ ಜಿಲ್ಲೆಯಲ್ಲಿ ಅರ್ಥಗರ್ಭಿತವಾಗಿ ಆದ್ದೂರಿಯಾಗಿ ಅಚವರಣೆಗೆ ಹೆಸರಿವಾಸಿಯಾಗಿದೆ ಇಂತಹ ಮಹಾನೀಯರ ಜಯಂತಿಗೆ ಅಧಿಕಾರಿಗಳು ಗೈರು ಹಾಗದೇ ತಾವೇ ಕುದ್ದಾಗಿ ತಮ್ಮ ತಮ್ಮ ಕಾರ್ಯಗಳನ್ನು ವಹಿಸಿಕೊಂಡು ಜಯಂತಿ ಹಾಜರಾಗಿ ಇನ್ನೂ ಸಮುದಾಯದಿಂದ ಹಲವು ನಾಯಕರನ್ನು ಅಭಿನಂಧಿಸುವ ಕಾರ್ಯ ಪ್ರತಿ ಬಾರಿಯೂ ಹಾಗುತ್ತದೆ ನಂತರ ಬೆಳ್ಳಿ ಸರೋಟದ ಮೂಲಕ ಶ್ರೀವಾಲ್ಮಿಕಿ ಭಾವಚಿತ್ರ ಮೆರವಣಿಗೆ, ಕಲಾ ಮೇಳಾ, ಕುಂಭ ಮೇಳಾ, ಡಿಜೆ ಸೌಂಡ್ಸ್, ಬೈಕ್ ರ‍್ಯಾಲಿ, ಈಗೇ ಪ್ರತಿಭಾ ಪುರಸ್ಕಾರ, ಒಳಗೊಂಡಿರುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಸೂರನಾಯಕ, ಡಾ.ನಾಗೇಂದ್ರ ನಾಯ್ಕ್, ಪಿ.ತಿಪ್ಪೆಸ್ವಾಮಿ, ಸಿಟಿ.ಶ್ರೀನಿವಾಸ್, ದಳವಾಯಿಮೂರ್ತಿ, ಸ್ವಪ್ನವೆಂಕಟೇಶ್, ಎಲ್‌ಐಸಿ.ತಿಪ್ಪೇಸ್ವಾಮಿ, ರಾಜಣ್ಣ, ಬಿ.ರಘುನಾಥ್, ಪ್ರಾಶಾಂಥ್, ಸಿಟಿ.ವೀರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಕೆಂಗಸೂರಿ, ಬಾಳೆಕಾಯಿ ಜ್ಯೋತಿ ಪ್ರಕಾಶ್,ಇನ್ನಿತರರು ಪಾಲ್ಗೊಂಡಿದ್ದರು.

ತಾಲೂಕು ಮಟ್ಟದ ಅಧಿಕಾರಿಗಳಾದ ತಹಶಿಲ್ದಾರ್ ರೇಹಾನ್ ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಇಓ.ಹೊನ್ನಯ್ಯ, ಇನ್ಸೆಪೆಕ್ಟೆರ್ ದೇಸಾಯಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಪಶುಇಲಾಖೆ ಸಹಾಯಕ ಅಧಿಕಾರಿ ಡಾ.ರೇವಣ್ಣ, ಕೃಷಿಇಲಾಖೆ ಸಹಾಯಕ ಅಧಿಕಾರಿ ಜೆ..ಅಶೋಕ್, ತೋಟಗಾರಿಕೆ ಸಹಾಯಕ ಅಧಿಕಾರಿ ವಿರೂಪಾಕ್ಷ, ಕಾವ್ಯ, ಹರಿಪ್ರಸಾದ್, ತಾಪ. ಸಹಾಯಕ ನಿರ್ದೇಶಕ ಸಂತೋಷ, ಸಂಪತ್, ಕುದಾಪುರ ತಿಪ್ಪೇಸ್ವಾಮಿ, ಅಕ್ಷರ ದಾಸೋಹ ತಿಪ್ಪೇಸ್ವಾಮಿ, ಪಿಡ್ಲೂ ವಿಜಯ್ ಬಾಸ್ಕರ್ , ಕಾರ್ಮಿಕ ಇಲಾಖೆ ಅಧಿಕಾರಿ ಕುಸುಮಾ, ಇತರರು ಇದ್ದರು.

ಪ್ರಮುಖವಾಗಿ ನಗರಸಭೆ ಸದಸ್ಯರು, ವಾಲ್ಮಿಕಿ ಸಂಘದ ಅಧ್ಯಕ್ಷರು, ವಾಲ್ಮೀಕಿ ಮಹಿಳಾ ಸಂಘದ ಮಹಿಳೆಯರು, ಗೈರಾಗಿದ್ದು ಸಭೆಯಲ್ಲಿ ಏರು ಧ್ವನಿಗೆ ಕಾರಣವಾಗಿತ್ತು.

Namma Challakere Local News
error: Content is protected !!