ಚಳ್ಳಕೆರೆ : ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ಕಸರತ್ತು ನಡೆಯುತ್ತಿದೆ ಅದರಂತೆ ಬಯಲು ಸೀಮೆ ಕಲ್ಲಿನ ಕೋಟೆ ನಾಡಿಗೆ ಲಗ್ಗೆ ಇಟ್ಟ ಹಲವು ನಾಯಕರುಗಳು ಟಿಕೆಟ್ ಆಕಾಂಕ್ಷಿಯೆAದು ತಾ ಮುಂದು ನೀಮುಂದೆ ಎಂದು ಸಂಚಾರ ನಡೆಸುತ್ತಿದ್ದಾರೆ.
ಅದರಂತೆ ಇಂದು ಚಿತ್ರದುರ್ಗ ಜಿಲ್ಲೆಯ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದು ನಾನೊಬ್ಬ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಚಿತ್ರದುರ್ಗ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ರಾಜ್ಯದ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿನಯ್ ಕುಮಾರ್ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.
ಇವರು ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆರು ಕ್ಷೇತ್ರದಲ್ಲಿ ಐದು ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತೆಗೆದುಕೊಂಡಿದೆ, ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರು ಸ್ವಾಮೀಜಿಯವರು ಹೇಳಿದ ಪ್ರಕಾರವಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ನಾನು ಈ ಜಿಲ್ಲೆಗೆ ನನ್ನನ್ನು ಹಿರಿಯ ನಾಯಕರು ಆಯ್ಕೆ ಮಾಡಿದರೆ ಖಂಡಿತ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು
ಇನ್ನೂ ಸ್ಥಳಿಯವರಿಗೆ ಅವಕಾಶ ನೀಡಿದರೆ ನಿನ್ನ ಹಾದಿ ಯಾವ ಕಡೆ ಎಂಬ ಮಾಧ್ಯಮ ಪ್ರಶ್ನೆಗೆ ನಾನು ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರನ್ನು ಸೂಚಿಸುತ್ತಾರೋ ಹಿರಿಯರಿಗೆ ಬಿಟ್ಟ ವಿಷಯ ಅವರೇನಾದರೂ ನನ್ನನ್ನು ಗುರುತಿಸಿದರೆ ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರೊಳು ಶ್ರಮಿಸುತ್ತೇನೆ ಎಂದರು.