ಚಳ್ಳಕೆರೆ : ನಾಡಿನಾದ್ಯಾಂತ ಆಚರಿಸುವ ನಾಡ ಹಬ್ಬ ದಸರಾ ಮವೋತ್ಸವಕ್ಕೆ ಮೈಸೂರು ಅರಮನೆ ಮೈದಾನದಲ್ಲಿ ಖ್ಯಾತ ಗಾಯಕ ಹಂಸಲೇಖರಿAದ ಚಾಲನೆ ದೊರಕಿದೆ ಅದರಂತೆ
ಪ್ರತಿವರ್ಷದಂತೆ ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಆಚರಿಸಿಕೊಂಡು ಬಂದAತಹ ದಸರಾ ಮವೋತ್ಸವಕ್ಕೆ ಆರ್ಯವೈಶ್ಯ ಸಂಘ ಹಾಗೂ ಆರ್ಯ ವೈಶ್ಯ ಯುವ ಸಂಘದಿAದ ಆಯೋಜಿಸಿದಂತ ದಸರಾ ಹಬ್ಬಕ್ಕೆ ಈ ವರ್ಷವೂ ಕೂಡ ದಸರಾ ಮವೋತ್ಸವಕ್ಕೆ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಮಠದ ಪರಮಪೂಜ್ಯ ಸ್ವಾಮೀ ಜಪಾನಂದ ಜಿ.ಮಹಾರಾಜ್ ರವರ ಅಮೃತ ಹಸ್ತದಿಂದ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ.
ನಿಜಕ್ಕೂ ಪ್ರಪ್ರಥಮ ಬಾರಿಗೆ ಸರಿಸುಮಾರು 800 ಜನಕ್ಕೂ ಮೀರಿ ಜನರು ನೆರೆದಿದ್ದು ವಾಸವಾಂಬ ದೇವಸ್ಥಾನದಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರ ಸಮೂಹದ ಮುಂದೆ ಪರಮಪೂಜ್ಯ ಸ್ವಾಮೀ ಜಪಾನಂದಜಿ ಅವರು ತಮ್ಮ ಅದ್ಭುತ ಕಂಠ ಶ್ರೀಯಿಂದ ಶ್ರೀದೇವಿ ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು.
ನಂತರ ಶರವನ್ನವರಾತ್ರಿ ಕಾರ್ಯಕ್ರಮದ ಉದ್ಘಾಟನೆ ನಂತರ ಕಾರ್ಯಕ್ರಮದಲ್ಲಿ ಗೋಪೂಜೆ ಹಾಗೂ ದೇವಿ ನಾಮ ಸಂಕೀರ್ತನೆ ಮತ್ತು ಉಪನ್ಯಾಸ ಆಯೋಜಿಸಲಾಗಿತ್ತು.
ತದನಂತರ ಈ ಬಾರಿಯ ಶರನ್ನವರಾತ್ರಿಯ ಧ್ಯೇಯವಾದ “ಗೋ ಸಂರಕ್ಷಣೆ “ಎಂಬುದು ಪರಮಪೂಜ್ಯ ಸ್ವಾಮೀಜಿಯವರಿಂದ ಗೋಪೂಜೆ ಮೂಲಕ ಆರಂಭವಾಯಿತು. ತದನಂತರ ಅದ್ಭುತವಾದ ಶ್ರೀದೇವಿ ನಾಮ ಸಂಕೀರ್ತನೆ ಹಾಗೂ ನವರಾತ್ರಿಯ ಮಹಿಮೆಯನ್ನು ಕೊಂಡಾಡುವ ಹಾಗೂ ಸನಾತನ ಧರ್ಮವನ್ನು ಅರ್ಥೈಸಿಕೊಂಡು ಅರ್ಥಗರ್ಭಿತವಾದ ನವರಾತ್ರಿಯನ್ನು ಆಚರಿಸಲು ಪೂಜ್ಯ ಸ್ವಾಮೀ ಜಪಾನಂದ ಜಿ ಅವರು ಕರೆಯುತ್ತರು. ಕಾರ್ಯಕ್ರಮ ಅದ್ದೂರಿಯಾಗಿ ನಡೆದು ಇಡೀ ದೇವಸ್ಥಾನ ಅರಮನೆಯ ವಾತಾವರಣವನ್ನು ಕಲ್ಪಿಸಿ ಕೊಟ್ಟಿದ್ದು, ಅದ್ಭುತವಾಗಿ ಅಲಂಕರಿಸಿದ ಶ್ರೀ ಕನ್ನಿಕಾಪರಮೇಶ್ವರಿ, ಹಾಗೂ ದೇವಸ್ಥಾನ ನಿಜಕ್ಕೂ ಜನರ ಶ್ರದ್ಧಾ ಭಕ್ತಿಯ ಸಾಕಾರ ರೂಪವಾಗಿ ಕಂಡುಬAದಿತ್ತು ಕಾರ್ಯಕ್ರಮ ಪರಮಪೂಜ್ಯ ಸ್ವಾಮೀಜಿಯವರಿಂದ ದೇವಿ ನಾಮ ಸಂಕೀರ್ತನೆ ಹಾಗೂ ಉಪನ್ಯಾಸಾದಿಗಳಿಂದ ನೆರವೇರಿತು.
ಯುವ ಸಂಘದ ಅಧ್ಯಕ್ಷ ಚೇತನ್‌ಕುಮಾರ್ ರವರ ನೇತೃತ್ವದಲ್ಲಿ ಅಭೂತಪೂರ್ವ ಕಾರ್ಯಕ್ರಮ ನೆರವೇರಿತು, ನಂತರ ಸನಾತನ ಧರ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆರಂಭವಾಯಿತು, ಪಾವಗಡದಿಂದ, ಮತ್ತು ಬೆಂಗಳೂರಿನಿAದ ಸರಿಸುಮಾರು ಐವತ್ತು ಸದ್ಭಕ್ತರು ಪೂಜ್ಯ ಸ್ವಾಮೀಜಿಯವರೊಂದಿಗೆ ಚಳ್ಳಕೆರೆಗೆ ಪ್ರಯಾಣ ಬೆಳೆಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಜೊತೆಯಲ್ಲಿ ಚಳ್ಳಕೆರೆಯ ಸದ್ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ಅನೇಕ ವರ್ಷಗಳಿಂದ ಪರಮಪೂಜ್ಯ ಸ್ವಾಮೀ ಜಪಾನಂದಜೀ ಅವರು ನಡೆಸುತ್ತಿರುವ ಗೋಸೇವೆಯ ಹಾಗೂ ಭೀಕರ ಬರಗಾಲದ ಸಂದರ್ಭದಲ್ಲಿ ಮೂಕ ಪ್ರಾಣಿಗಳಿಗೆ ನಿರಂತರವಾಗಿ ಮೇವನ್ನು ನೀಡುತ್ತಿರುವ ಪೂಜ್ಯ ಸ್ವಾಮೀಜಿಯವರ ಕಾರ್ಯ ವೈಖರಿ ಚಳ್ಳಕೆರೆ ಮತ್ತು ಚಿತ್ರದುರ್ಗ ಭಾಗದ ಜನರಿಗೆ ಚಿರ ಪರಿಚಿತ ಎಂಬುದನ್ನು ಈ ಕಾರ್ಯಕ್ರಮ ಸಾಕ್ಷಿಭೂತವಾಯಿತು.ಪೂಜ್ಯ ಸ್ವಾಮಿ ಜಪಾನಂದ ಜೀ ಕೈಗೊಂಡಿರುವ ಸೇವಾ ಯಜ್ಞ ಕ್ರಮೇಣವಾಗಿ ಇತರೆ ಜಿಲ್ಲೆಗಳಿಗೆ ಹಬ್ಬುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ತಾಯಿ ದುರ್ಗೆಯ ಕೃಪೆಯಿಂದ ಈ ಸೇವಾ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂಬುದೇ ಸಾವಿರಾರು ಭಕ್ತರ ಮನದಾಸೆಯಾಗಿತ್ತು.

About The Author

Namma Challakere Local News
error: Content is protected !!