ಪಿ.ಎಂ ಸ್ವ – ನಿಧಿ: ಸಾಲ ಸೌಲಭ್ಯಕ್ಕೆ ಅರ್ಜಿ

ನಾಯಕನಹಟ್ಟಿ:: ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಅತ್ಮ ನಿರ್ಭರ್ ನಿಧಿಯ ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ದೋಬಿ. ಇಸ್ತ್ರಿ. ಸೇವೆ ಹಳ ಪಾತ್ರಗಳ ವ್ಯಾಪಾರ ಬಡಗಿ ಬಿದೀರಿನ ಬುಟ್ಟಿ ಬುಂಬೂ ಏಣಿ ವ್ಯಾಪಾರ ಹೂವಿನ ಕುಂಡಗಳ ವ್ಯಾಪಾರ ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್) ದಿನಪತ್ರಿಕೆ ಹಂಚಿಕೆ ಮತ್ತು ಅಲು ಮಾರಾಟ ಮಾಡುವವರು ಪಿ ಎಂ ಸ್ವ -ನಿಧಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲಿಸಬಹುದಾಗಿದೆ.

ಆಸಕ್ತರು: ರೇಷನ್ ಕಾರ್ಡ್ ಆಧಾರ್ ಕಾರ್ಡ್ ಚುನಾವಣೆ ಗುರುತಿನ ಚೀಟಿ ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ವ್ಯಾಪಾರ ಮಾಡುತ್ತಿರುವ ಸ್ಥಳ ಫೋಟೋ ಪಾಸ್ ಫೋಟೋ ಸೈಜ್-2 ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆಗಳೊಂದಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯ ನಾಯಕನಹಟ್ಟಿ ಡೇ -ನಲ್ಮ್ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯತಿಯ ಪ್ರಭಾರಿ ಮುಖ್ಯ ಅಧಿಕಾರಿ ಎಂ. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About The Author

Namma Challakere Local News
error: Content is protected !!