ಚಳ್ಳಕೆರೆ : ಗ್ರಾಮೀಣ ಭಾಗದ, ಚಿಲ್ಲರೆ ಅಂಗಡಿ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ.

ಇನ್ನೂ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಬಾಟಲು ತಂದುಕೊಡುತ್ತಿರುವ ವೀಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗುತ್ತಿದೆ.

ತಾಲೂಕಿನಲ್ಲಿ ಮಳೆ ಬೆಳೆಯಿಲ್ಲದೆ ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ.ರೈತರು ಬೆಳೆದ ಬೆಳೆಗಳು ಒಣಗಿ ಹೋಗಿದ್ದು ಬೆಳೆದ ಅಲ್ಪಸ್ವಲ್ಪ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಡುವೆಯೂ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯಮಾರಾಟ ಜೋರಾಗಿದೆ.

ಜನರು ಆರ್ಥಿಕ ಸಂಕಷ್ಟದಲ್ಲಿದ್ದರೂ ಕೆಲವರು ಗ್ರಾಮದಲ್ಲಿಯೇ ಸುಲಭವಾಗಿ ಸಿಗುವ ಮದ್ಯ ಸೇವನೆಯಿಂದ ಇದರ ಚಟಕ್ಕೆ ಬಿದ್ದಿದ್ದಾರೆ. ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

ಗ್ರಾಮೀಣ ಭಾಗದ ಕೆಲವು ಗೂಡಂಗಡಿ, ಸಣ್ಣಪುಟ್ಟ ಮಾಂಸಾಹಾರಿ ಹೋಟೆಲ್‌ಗ‌ಳು, ಕೆಲವರು ಮನೆಗಳಲ್ಲಿ, ಅಂಗಡಿಗಳೂ ಸಹ ಮದ್ಯ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದೆ. ನಗರದ ವೈನ್‌ಶಾಪ್‌ ಗಳಿಂದ ಖರೀದಿಸಿ 10ರಿಂದ 20 ರೂ. ಹೆಚ್ಚುವರಿ ದರ ವಿಧಿಸಿ ಮಾರಾಟ ಸಹ ಮಾಡುತ್ತಾರೆ.

ಇನ್ನೂ ಮದ್ಯ ಮಾರಾಟಕ್ಕೆ ಕೊನೆ ಇಲ್ಲ ಎಂಬಂತೆ ಕೆಲವರು ಮನೆಗಳಲ್ಲಿ ತೋಟ, ಕೊಟ್ಟಿಗೆ, ನೆಲದೊಳಗೆ ಹೊಂಡ ಮಾಡಿ, ಮನೆಯ ಅಟ್ಟ, ಶೌಚಗೃಹಗಳಲ್ಲೂ ಮಾರಾಟ ಮಾಡಲು ಮದ್ಯ ಶೇಖರಿಸಿ ಇಡುತ್ತಾರೆ. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಕಠಿಣ ಕ್ರಮ ವಹಿಸದ ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಆಗಾಗ ದಾಳಿ ನಡೆಸಿ ಪ್ರಕರಣ ದಾಖಲಿಸಿದರೂ ಅಕ್ರಮ ಮದ್ಯ ಮಾರಾಟಕ್ಕೆ ಕೊನೆ ಇಲ್ಲದಂತಾಗಿದೆ ಎಂಬುದು ಗ್ರಾಮೀಣ ಭಾಗದ ಮಹಿಳೆಯರ ಅಳಲು.

ಅಪ್ರಪ್ತ ಬಾಲಕನಿಂದ ಮದ್ಯಮಾರಾಟ ವೈರಲ್ ಆದ ವಿಡಿಯೋ

ತಾಲೂಕಿನ ನಾರಾಯಣಪುರ ಕೋನಿಗರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯಮಾರಾಟದ ಬಗ್ಗೆ ಕೆಆರ್ ಎಸ್ ಪಕ್ಷದ ಪದಾಧಿಕಾರಿಗಳು ವೈರಲ್ ಆದ ವಿಡಿಯೋ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾರಾಯಾಣಪುರ ಗ್ರಾಮದ ಗೇಟ್ ಕಿರಾಣಿ ಅಂಗಡಿಯಲ್ಲಿ ಮದ್ಯ ಖರೀದಿ ನೆಪದಲ್ಲಿ ಡ್ರಿಂಕ್ಸ್ ಯಾವುದಿದೆ ಎಂದಾಗ ಮಹಿಳೆ ಕೆಲವು ಬ್ರಾಂಡ್ ಗಳ ಹೆಸರೇಳುತ್ತಾರೆ ಬೆಲೆಯೂ ಹೇಳುತ್ತಾರೆ ಕೊಡಿ ಎಂದು ಕೆಅರ್ ಎಸ್ ಪಕ್ಷದವರು ಕೇಳಿದಾಗ ಅಪ್ರಪ್ತ ಬಾಲಕನೊಬ್ಬ ಬೀಯರ್ ಬಾಟಲಿ ತಂದು ಕೆಆರ್ ಎಸ್ ಪಕ್ಷದ ಯುವಕರಿಗೆ ನೀಡುವ ವೀಡಿಯೋ ವೈರಲ್ ಆಗಿದೆ. ಅಪ್ರಾಪ್ತ ವಯಸ್ಕ ವ್ಯಕ್ತಿಗೆ ಮದ್ಯಮಾರಾಟ ಹಾಗೂ ನೀಡುವುದು ಅಪರಾದ ಎಂದು ನೀತಿ ಹೇಳುವ ಕಾನೂನು ಹಲ್ಲು ಕಿತ್ತಂತಾಗಿದ್ದು.

ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಕಾನೂನು ಬಾಹಿರ ಅದರಲ್ಲೂ ಅಪ್ರಪ್ತ ಮಕ್ಕಳನ್ನು ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿಸಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ.

ಈಗಲಾದರೂ ಅಕ್ರಮ ಮದ್ಯ ಮಾರಾಟದಲ್ಲಿ ಅಪ್ರಪ್ತ ಬಾಲಕರನ್ನು ತೊಡಗಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳುವರೋ ಕಾದು ನೋಡ ಬೇಕಿದೆ.

Namma Challakere Local News
error: Content is protected !!