ಕಲುಷಿತ ನೀರು : ಪ್ರಾಣ ಭಯದಲ್ಲಿ ಚಿಕ್ಕೇನಹಳ್ಳಿ ಗ್ರಾಮದ ಜನ.
ಚಳ್ಳಕೆರೆ: ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷದಿಂದ ಸ್ವಚ್ಛಗೊಳಿಸದೇ ಇರುವಂತ ಟ್ಯಾಂಕಿಯಲ್ಲಿ ಬರುವ ಕಲುಷಿತ ನೀರನ್ನು ಸೇವಿಸುತ್ತಿದ್ದು, ಗ್ರಾಮದ ಜನ ಜೀವ ಭಯದಲ್ಲಿ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ.
ನಿನ್ನೆ ತಾನೆ ಚಿತ್ರದುರ್ಗಕ್ಕೆ ಆಗಮಿಸಿದಂತಹ ಸಿ.ಎಂ.ಸಿದ್ದರಾಮಯ್ಯ ಕವಾಡಿಗರ ಹಟ್ಟಿಗೆ ಭೇಟಿ ನೀಡಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ವ್ಯವಸ್ಥೆ ಶುದ್ಧವಾಗಿರುವಂತೆ ವ್ಯವಸ್ಥೆ ಕಲ್ಪಿಸಿಕೊಡಿ ಇಲ್ಲವಾದರೆ ಅಧಿಕಾರಿಗಳನ್ನೆ ನೇರೆ ಹೊಣೆಗಾರರನ್ನಾಗಿ ಮಾಡಾಗುವುದು ಎಚ್ಚರಿಕೆ ನೀಡಿದ್ದಾರೆ.
ಆದರೂ ಚಿಕ್ಕೆನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಪ್ರತಿ ನಿತ್ಯ ಕುಡಿಯುವುದಕ್ಕೆ, ಗೃಹ ಬಳಕೆಗೆ ಇದೇ ನೀರನ್ನ ಬಳಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ಟ್ಯಾಂಕಿ ಸ್ವಚ್ಛಗೊಳಿಸದೆ ಟ್ಯಾಂಕಿ ಅಕ್ಕಪಕ್ಕ ಗಿಡಗಂಟಿಗಳು ಹೆಚ್ಚಿನದಾಗಿ ಬೆಳೆದಿದೆ ಜೋತೆಗೆ ನಲ್ಲಿಗಳು ಸಹ ಮುರಿದು ಬಿದ್ದಿದ್ದು , ಟ್ಯಾಂಕ್ ಗೆ ಮುಚ್ಚುವ ಮುಚುಳವು ಮುರಿದು ಹೋಗಿದೆ ಇದರಿಂದ ಕುಡಿಯುವ ನೀರಿಗೆ ರಕ್ಷಣೆ ಇಲ್ಲದಾಗಿದೆ.
ಇದರಿಂದ ಸೊಳ್ಳೆಗಳು ನೀರಿನ ಮೇಲೆ ಕೊತು ಸಾಂಕ್ರಾಮಿಕ ರೋಗ ಬರುವ ಭೀತಿಯಲ್ಲಿ ಜನರು ಇದ್ದಾರೆ. ಜೋತೆಗೆ ಜಾನುವಾರುಗಳ ಕುಡಿಯುವ ನೀರಿನ ತಟ್ಟಿಯಲ್ಲಿ ಸಹ ಸ್ವಚ್ಛತೆ ಇಲ್ಲದಾಗಿದೆ.
ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕಿ, ಜಾನುವಾರುಗಳು ಸೇವಿಸುವ ನೀರಿನ ತಟ್ಟಿಯನ್ನು ಸ್ವಚ್ಛಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.