ಚಳ್ಳಕೆರೆ ನಗರದ ಜೈನ್ ಸಮುದಾಯ ಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ್ ಸಂಘದಿಂದ ಹಾಗೂ ಹಲವು ಸ್ವಯಂ ಸೇವಾ ಸಂಘಗಳಿಂದ ಆಯೋಜಿಸಿದ್ದ ಮಧ್ಯವರ್ಜನಾ ಶಿಬಿರದಲ್ಲಿ ಕಳೆದ ಒಂದು ವಾರದಿಂದ ಚಳ್ಳಕೆರೆ ತಾಲೂಕಿನ ಸುಮಾರು150 ಕ್ಕೂ ಹೆಚ್ಚು ಕುಟುಂಬದ ಸದಸ್ಯರನ್ನು ಕುಡಿತದಿಂದ ಅವರನ್ನು ಸ್ವಚ್ಚ ನಾಗರೀಕರನ್ನಾಗಿ ಮಾಡುವ ಸದುದ್ದೇಶದಿಂದ ಈ ಶಿಬಿರ ಉಪಯುಕ್ತವಾಗಿದೆ ಎಂದು ಆಂಗ್ಲ ಉಪನ್ಯಾಸಕರಾದ ವೆಂಕಟೇಶ್ ಮೂರ್ತಿ ಹೇಳಿದರು.
ನ್ನೂ ಸಂಜೀವಿನಿ ರಕ್ತಪರಿಕ್ಷಾ ಕೇಂದ್ರದ ಮಾಲೀಕರಾದ ಮೃತ್ಯುಂಜಯ (ಮುತ್ತು) ಕಾರ್ಯಕ್ರಮದಲ್ಲಿ ಆರೋಗ್ಯವನ್ನು ಕುರಿತು ವಿಶೇಷವಾದ ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಕವಿತಾ ಬೋರಯ್ಯ ಮತ್ತು ಉಪನ್ಯಾಸರಕರಾದ ರಾಮಾಂಜನೇಯಲು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ನೇತಾಜಿ ಪ್ರಸನ್ನ, ಮಧ್ಯವರ್ಜನ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ಓಬಣ್ಣ, ಕುಮಾರಿ ಅಪ್ಸರ , ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು