ಚಳ್ಳಕೆರೆ :
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಗೌರ ಸಮುದ್ರ ವ್ಯಾಪ್ತಿಗೆ ಸೇರುವ ಬಂಡೆತಿಮ್ಲಾಪುರ ಗ್ರಾಮ ದೊಡ್ಡನಾಗಯ್ಯನ ಹಟ್ಟಿ ಊರಿನಲ್ಲಿ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ ಮಳೆಯ ನೀರು ನಿಂತಿರುವ ಕಾರಣದಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಹಾಗೂ ಶಾಲೆಯ ಕಟ್ಟಡಗಳ ದುರಸ್ತಿ ಇರುವುದರಿಂದ ಮಳೆ ಬಂದರೆ ಮಳೆಯ ನೀರು ಶಾಲೆಯ ಒಳಗಡೆ ಬೀಳುತ್ತದೆ
ಹಾಗೂ ಶೌಚಾಲಯಗಳ ವೈವಸ್ಥೆ ಇಲ್ಲದ ಕಾರಣ ಶಿಕ್ಷಕರು ಹಾಗು ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಶಾಲೆಯ SDMC ಅಧ್ಯಕ್ಷರು ಚಿತ್ತಯ್ಯ ಪರೀಶಿಲನೆ ನಡೆಸಿ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು..

