ಚಳ್ಳಕೆರೆ : ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ
ಮತ್ತು ಸ್ವತ್ತಿನ ಅಪರಾಧಗಳನ್ನು, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಿಸಿ
ಕ್ಯಾಮರಾಗಳನ್ನು ಆಳವಡಿಸಲು ಜಿಲ್ಲಾಧಿಕಾರಿಗಳು ನಗರಸಭೆಗೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ.

ಚಳ್ಳಕೆರೆ ನಗರದಲ್ಲಿ ಕಾನೂನು ಮತ್ತು
ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿವಿಧ ಕಾರ್ಯಕ್ರಮ, ಹಬ್ಬ ಹರಿದಿನ, ವಿವಿಧ ಪ್ರತಿಭಟನೆಗಳು ಜಾಥಗಳು
ಮತ್ತು ಮೆರವಣಿಗೆಗಳು ನಡೆಯುವ ಕಾಲಕ್ಕೆ ಶಾಂತಿ ಸುವ್ಯವಸ್ಥೆ ಹಾಗೂ ರಸ್ತೆ ಅಪಘಾತ ಪ್ರಕರಣಗಳು ಮತ್ತು ಸ್ವತ್ತು ಕಳವು ಪ್ರಕರಣ, ಸರಗಳ್ಳತನ ಪ್ರಕರಣಗಳು ವರದಿಯಾಗದಂತೆ ತಡೆಗಟ್ಟಲು / ಪತ್ತೆ ಮಾಡುವ ಸಲುವಾಗಿ ಚಳ್ಳಕೆರೆ ಪಟ್ಟಣದ ಪ್ರಮುಖ ಸ್ಥಗಳಲ್ಲಿ ಉತ್ತಮ ಗುಣಮಟ್ಟದ ಸಿ.ಸಿ. ಕ್ಯಾಮರಾಗಳನ್ನು ತುರ್ತಾಗಿ ಅಳವಡಿಸಿಕೊಡಲು
ಪೊಲೀಸ್‌ ವೃತ್ತ ನಿರೀಕ್ಷಕರು ಪ್ರಸ್ತಾವನೆ ಸಲ್ಲಿಸಿದ್ದು, ನಗರಸಭಾ ನಿಧಿಯಲ್ಲಿ ಅನುದಾನ ಲಭ್ಯತೆ ಇಲ್ಲದೇ ಇರುವ ಕಾರಣ

ವಿವಿಧ ಸ್ಥಳಗಳಲ್ಲಿ ಅಳವಡಿಸುವ
ಕ್ಯಾಮರಾಗಳ ಬಗ್ಗೆ ಪೊಲೀಸ್ ಆರಕ್ಷಕ ನಿರೀಕ್ಷಕರು, ಚಳ್ಳಕೆರೆ ರವರನ್ನು ಸಂಪರ್ಕಿಸಿ ಉತ್ತಮ ಗುಣಮಟ್ಟದ ಸಿ.ಸಿ.
ಕ್ಯಾಮರಾಗಳನ್ನು ಮಾಹಿತಿ ಪಡೆದು ವಿವರವಾದ ಡಿ.ಪಿ.ಆರ್‌ನ್ನು ತಯಾರಿಸಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ
ಪರಿಶೀಲನೆ ಅನುಮೋದನೆ ಪಡೆದು ಡಿ.ಎಂ.ಎಫ್ ಯೋಜನೆಯ ಅನುದಾನದಡಿ ತುರ್ತಾಗಿ ಸಿ.ಸಿ. ಕ್ಯಾಮರಾ
ಅಳವಡಿಸಲು ಸೂಚಿಸಿದ್ದಾರೆ.

ಇನ್ನೂ ನಗರಸಭೆ ಪೌರಾಯುಕ್ತರು ಅತೀ ತುರ್ತಾಗಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಬೇಕಾದ ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿದೆ.

About The Author

Namma Challakere Local News
error: Content is protected !!