filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಚಳ್ಳಕೆರೆ : ಎರಡು ವರ್ಷದ ಹಿಂದೆ ಖರೀದಿ ಮಾಡಿದ ದ್ವಿಚಕ್ರ ವಾಹನದ ಎರಡು ಚಕ್ರಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರಿಂದ ಬೈಕ್ ಚಾಲನೆಯಲ್ಲಿ ಇರುವಾಗ ಎರಡು ಚಕ್ರಗಳು ಮುರಿದು ಹೋಗಿದ್ದು ಇದಕ್ಕೆ ಹೀರೋ ಶೋರೂಮ್ ಕಂಪನಿಯೇ ನೇರ ಹೊಣೆ , ಕಳಪೆ ಗುಣಮಟ್ಟದ ಚಕ್ರಗಳು ಹಾಕಿರುವುದರಿಂದ ಈ ರೀತಿ ಚಕ್ರಗಳು ಮುರಿದು ಹೋಗಿವೆ, ನಾವು ಅತಿ ಸೂಕ್ಷ್ಮವಾಗಿ, ಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದೇವೆ ಆದರೆ ಏಕಾಏಕಿ ಬೈಕ್ ಚಾಲನೆಯಲ್ಲಿ ಇರುವಾಗಲೇ ಎರಡು ಚಕ್ರಗಳು ಮುರಿದಿದ್ದು ಇದಕ್ಕೆ ಕಳಪೆ ಗುಣಮಟ್ಟವೇ ಕಾರಣ ಎಂದು ಬೈಕ್ ಮಾಲಿಕ ಆರೋಪಿಸಿದ್ದಾರೆ.

ಇನ್ನು ಚಳ್ಳಕೆರೆ ನಗರದಲ್ಲಿರುವ ಗಜೇಂದ್ರ ಹೊಂಡಾ ಶೋರೂಮ್ ಕಚೇರಿಗೆ ಭೇಟಿ ನೀಡಿ ಬೈಕ್ ಮಾಲಿಕ ಹನುಮಂತರೆಡ್ಡಿ, ಹಾಗೂ ರವಿ, ಶೀನು, ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇನ್ನು ಸಂಬಂಧಪಟ್ಟ ಶೋರೂಮ್ ಮ್ಯಾನೆಜರ್ ಅನಿಲ್ ಅವರನ್ನು ಸಂಪರ್ಕಿಸಿದಾಗ ನಿಮ್ಮ ಆಜಾಗ್ರತೆ ಹಾಗೂ ಎರಡು ಚಕ್ರದಲ್ಲಿ ಗಾಳಿ ಇಲ್ಲದೆ ಇರುವಾಗ ಬೈಕ್ ಚಾಲನೆ ಮಾಡಿರುವುದು ಈ ಕಾರಣದಿಂದ ಚಕ್ರಗಳು ಮುರಿದಿವೆ ಇದಾಗಿಯೂ ದ್ವಿಚಕ್ರವಾಹನದ ವಿಮೆ ಕೂಡ ರದ್ದಾಗಿ ಹೋಗಿದೆ , ಆದ್ದರಿಂದ ನಾವು ಯಾವುದೇ ರೀತಿಯಿಂದ ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ..

About The Author

Namma Challakere Local News
error: Content is protected !!