ಚಿತ್ರದುರ್ಗ: ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿ
ಕೆಲಸ ಮಾಡುತ್ತೇವೆ
ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪನವರ
ಮನೆಯನ್ನು ಮೂಲ ರೂಪದಲ್ಲಿ ಯಾವುದೇ ಬದಲಾವಣೆ
ಮಾಡದೆ ನವೀಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್
ಶುಕ್ರವಾರ ತಿಳಿಸಿದರು. ಈ ಯೋಜನೆಗೆ ರಾಜ್ಯ ಪುರಾತತ್ವ
ಇಲಾಖೆಯ ಸಹಕಾರ ಮತ್ತು ತಾಂತ್ರಿಕ ಸಲಹೆ ಪಡೆಯಲಾಗಿದೆ.
ನಿರ್ಮಿತಿ ಕೇಂದ್ರವು 1.20 ಕೋಟಿ ರೂ. ವೆಚ್ಚದ ವಿಸ್ಕೃತ ಯೋಜನಾ
ವರದಿಯನ್ನು ಸಿದ್ಧಪಡಿಸಿದೆ.

