ಸ್ವಾತಂತ್ರಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿಯವರ ಕಾರ್ಯ ಶ್ಲಾಘನೀಯ ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯಧಿಕಾರಿ ಎಂ ಶಿವಕುಮಾರ್
.
ನಾಯಕನಹಟ್ಟಿ:; ಅ.2. ನಮ್ಮ ದೇಶದ ಹೆಮ್ಮೆ, ತನ್ನ ತತ್ವ, ಆದರ್ಶಗಳಿಂದ ಜಗತ್ತನ್ನು ಬೆಳಗಿದ ಮಹಾತ್ಮ ಗಾಂಧೀಜಿ ಅವರ ಜನ್ಮದಿನವಿದು. ಎಂದು ಪಟ್ಟಣ ಪಂಚಾಯಿತಿಯ ಪ್ರಭಾರಿ ಮುಖ್ಯ ಅಧಿಕಾರಿ ಎಂ ಶಿವಕುಮಾರ್ ಹೇಳಿದ್ದಾರೆ.
ಅವರು ಸೋಮವಾರ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ್ದಾರೆ ಈ ವರ್ಷ ನಾವು ಬಾಪೂಜಿ ಅವರ 154 ನೇ ಜಯಂತಿಯನ್ನು ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ ದಿನವಿದು.ಗಾಂಧೀಜಿ ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಸ್ವಾತಂತ್ರ್ಯದ ಕಡೆಗೆ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅವರು ಎಲ್ಲರ ಬದುಕಿನ ಬೆಳಕು, ಆದರ್ಶವೂ ಹೌದು ಎಂದರು.
ಇದೇ ವೇಳೆ ಆರೋಗ್ಯ ನಿರೀಕ್ಷಣಾಧಿಕಾರಿ ಟಿ ರುದ್ರಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ವಿನುತಾ, ದುರುಗಪ್ಪ, ಅಬಕಾರಿ ತಿಪ್ಪೇಸ್ವಾಮಿ, ಪಾಪಮ್ಮ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಂತರಾಜ್, ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಆರೋಗ್ಯ ನಿರೀಕ್ಷಣಾಧಿಕಾರಿ ಟಿ ರುದ್ರಮುನಿ, ಟಿ ತಿಪ್ಪೇಸ್ವಾಮಿ, ಸುರೇಶ್, ನಾಗರತ್ನಮ್ಮ, ದಯಾನಂದ್, ಮಧು, ಅಭಿಷೇಕ್, ಲತಾಮ್ಮ, ಮಂಗಳಮ್ಮ, ರೇಣುಕಮ್ಮ ಸೇರಿದಂತೆ ಪೌರಕಾರ್ಮಿಕರು ಇದ್ದರು