ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ನಾಯಕನಹಟ್ಟಿ ಹೋಬಳಿಯ ಸಮಸ್ತ ನಾಯಕ ಸಮುದಾಯದ ವತಿಯಿಂದ ಅಕ್ಟೋಬರ್ 28ರಂದು ಪಟ್ಟಣದಲ್ಲಿ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿದೆ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು
ನಾಯಕನಹಟ್ಟಿ… ನಮ್ಮ ಹೋಬಳಿಯಲ್ಲಿ ಅತಿ ಹೆಚ್ಚು ನಾಯಕ ಸಮುದಾಯದವರು ವಾಸ ಮಾಡುತ್ತಿದ್ದು ಈ ಬಾರಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಹೇಳಿದ್ದಾರೆ.
ಅವರು ಪಟ್ಟಣದ ರಾಜಾಹಟ್ಟಿ ಪ್ರೌಢಶಾಲೆ ಆವರಣದಲ್ಲಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ, ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ ಕಳೆದ ಎರಡು ವರ್ಷದಿಂದ ಕೋವಿಡ್ ಮತ್ತು ಎಸ್ ಟಿ ಮೀಸಲಾತಿ ವಿಚಾರದಿಂದಾಗಿ ವಾಲ್ಮೀಕಿ ಜಯಂತಿಯ ಅದ್ದೂರಿಯಾಗಿ ಆಚರಣೆ ಮಾಡಲು ಆಗಲಿಲ್ಲ ಆದ್ದರಿಂದ ಈ ಬಾರಿ ನಮ್ಮ ನಾಯಕನಹಟ್ಟಿ ಹೋಬಳಿಯ ಎಂಟು ಗ್ರಾಮ ಪಂಚಾಯಿತಿ ಮತ್ತು ಒಂದು ಪಟ್ಟಣ ಪಂಚಾಯತಿಯ ನಮ್ಮ ಎಲ್ಲಾ ನಾಯಕ ಸಮುದಾಯದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ಕಾರಿ ನೌಕರರು ಸೇರಿದಂತೆ ಅವರೊಂದಿಗೆ ಚರ್ಚಿಸಿ ಅವರ ಒಂದು ಸಲಹೆ ಸೂಚನೆಯ ಮೇರೆಗೆ ಈ ಬಾರಿ ಪಟ್ಟಣದಲ್ಲಿ ಇಡೀ ಜಿಲ್ಲೆಗೆ ಮಾದರಿಯಾಗುವಂತೆ ವಾಲ್ಮೀಕಿ ಜಯಂತಿಯನ್ನು ಅದ್ದೂರಿ ಆಚರಣೆ ಮಾಡಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹಟ್ಟಿ ಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು,ಎಂದರು.
ಈ ಸಂದರ್ಭದಲ್ಲಿ ಪಾಟೀಲ್ ಜಿ ಎಂ. ತಿಪ್ಪೇಸ್ವಾಮಿ, ನಿರ್ದೇಶಕರಾದ ನೇರಲಗುಂಟೆ ಭೈಯಣ್ಣ, ಪಿಓಟಿ ತಿಪ್ಪೇಸ್ವಾಮಿ, ಹನುಮಣ್ಣ, ಚಿನ್ನಯ್ಯ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಓಬಯ್ಯ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಬಂಡೆ ಕಪಿಲೆ ಓಬಣ್ಣ, ಮಾಜಿ ಬಗರು ಕಮಿಟಿ ಸದಸ್ಯರಾದ ಬಿ ಶಾರದಮ್ಮ, ನಲಗೇತನಹಟ್ಟಿ ಪಿ ಎನ್ ಮುತ್ತಯ್ಯ, ನಲ್ಲನ ದೊಡ್ಡ ಬೋರಯ್ಯ, ಎನ್ ಎಸ್ ಮಂಜುನಾಥ್, ಜಿ ವೈ ತಿಪ್ಪೇಸ್ವಾಮಿ, ಜಿ ಬಿ ಮುದಿಯಪ್ಪ, ಎಸ್ ಟಿ ಬೋರ್ ಸ್ವಾಮಿ, ಟಿ ಬಸಪ್ಪ ನಾಯಕ, ಏಜೆಂಟ್ರು ಪಾಲಯ್ಯ, ಗುಂತಕೋಲಮ್ಮನಹಳ್ಳಿ ಜೆಸಿಬಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಜಿ ಎಂ ಜಯಣ್ಣ, ವಿಷ್ಣು, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಿ ಕಾಟಯ್ಯ, ಕೆ ಟಿ ನಾಗರಾಜ್, ರೇಖಲಗೆರೆ ತಿಪ್ಪೇಸ್ವಾಮಿ, ವೀರೇಶ್, ಗೌಡಗೆರೆ ಮಾಜಿ ಅಧ್ಯಕ್ಷ ಟಿ ರಂಗಪ್ಪ, ಎನ್ ದೇವರಹಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಲಿ ಸದಸ್ಯ ಡಾ. ಕಾಟಂಲಿಂಗಯ್ಯ ,ಗಿಣಿಯರ್ ತಿಪ್ಪೇಶ್, ಅಬ್ಬೇನಹಳ್ಳಿ ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ಸೇರಿದಂತೆ ನಾಯಕನಹಟ್ಟಿ ಹೋಬಳಿಯ ಸಮಸ್ತ ನಾಯಕ ಸಮುದಾಯದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು