ಚಳ್ಳಕೆರೆ : ಮಹಾತ್ಮ ಗಾಂಧಿಯವರು ಸರಳ ಹಾಗೂ ಸಜ್ಜನಿಕೆ ಬದುಕು ರೂಪಿಸಿಕೊಂಡು ಸ್ವಾತಂತ್ರö್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಸರಳ ವ್ಯಕ್ತಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಆಯೋಜಿಸಿದ್ದ ಮಹಾತ್ಮ ಗಾಂದಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿಶ್ವದಲ್ಲಿ ಒಬ್ಬರೇ ಮಹಾತ್ಮರು ಅವರೇ ಮಹಾತ್ಮ ಗಾಂಧಿಯವರು, ದೇಶದ ರಾಷ್ಟಿçÃಪಿತವೆಂದು ಬಿಂಬಿತವಾದ ಗಾಂಧೀಜಿಯವರು ವಿಶ್ವಮಾನವರಾಗಿ ಹೊರಹೊಮ್ಮಿದ್ದಾರೆ, ಇಂದು ದೇಶ ವಿದೇಶಗಳಲ್ಲಿ ಅವರ ನಡತೆ ಅಳವಡಿಸಿಕೊಂಡಿದ್ದಾರೆ. ಸತ್ಯ ಅಹಿಂಸೆ, ಮಾರ್ಗದಲ್ಲಿ ಅದರಂತೆ ಈಡೀ ದೇಶದಲ್ಲಿ ಅತ್ಯಂತ ಸದಾರಣ ವ್ಯಕ್ತಿತ್ವ ಹೊಂದಿದ ದೇಶದ ಎರಡನೇ ಪ್ರಧಾನಿ ಲಾಲ್ ಬಹಹದ್ದೂರ್ ಶಾಸ್ತಿç ಮಾರ್ಗದರ್ಶನದಲ್ಲಿ ನಾವು ನಿವೆಲ್ಲರೂ ನಡೆಯುವ ಅನಿವಾರ್ಯವಿದೆ, ಅದರಂತೆ ಗಾಂಧಿ ಹಾಗೂ ಶಾಸ್ತಿçಯನ್ನು ಬರೀ ಜಯಂತಿಗೆ ಸೀಮಿತವಾಗಿಸದೆ, ಅವರ ಸೇವೆ ಈಗೀನ ಯುವಕ ಜನತೆಗೆ ಅತ್ಯಂತ ಆದರ್ಶಪ್ರೀಯವಾಗುತ್ತಿದೆ ಎಂದರು.ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ, ಭಾರತದ ಸ್ವಾಂತ್ರö್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಧೀಮಂತರು ಉಪವಾಸ ಸತ್ಯಾಗ್ರಹ ಹಾಗೂ ಹೋರಾಟಗಳು ಸರಳ ಸ್ವರೂಪ ಮತ್ತು ಅಹಿಂಸೆ ಮಾರ್ಗದಲ್ಲಿ ನಡೆಯಬೇಕೆಂದು ಇಚ್ಚಿಸಿದ್ದರು, ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯರಾದ ನಾಗರಾಜ್ ಮಾತನಾಡಿ, ಗಾಂಧಿಜೀ ಸರ್ವ ಕಾಲಕ್ಕೂ ಅವರ ವ್ಯಕ್ತಿತ್ವ ಬದಲಾಗದೆ, ಅವರ ತೋರಿದ ಅಹಿಂಸ ಮಾರ್ಗ ಇಂದು ಆಧುನಿಕ ಯುಗದಲ್ಲಿ ದಾರಿ ದೀಪವಾಗಿವೆ, ಅದರಂತೆ ಆಫ್ರಿಕಾದಲ್ಲಿ ಕಪ್ಪು ಬಿಳುಪು ಹೋರಾಟದ ಮೂಲಕ ಯಶಸ್ವಿಯಾಗಿ ನಂತರ ಭಾರತಕ್ಕೆ ಮರುಳುತ್ತಾರೆ, ಈಗೇ 1915ರಲ್ಲಿ ಭಾರತಕ್ಕೆ ಬಂದ ಗಾಂಧೀಜೀ ಇಂದು ಈಡೀ ಪ್ರಪಂಚದಲ್ಲಿ ತಮ್ಮ ನೇತರರಾಗಿದ್ದಾರೆ.ಅದರಂತೆ ಚಳ್ಳಕೆರೆ ತಾಲೂಕಿನಲ್ಲಿ ಸು.1925ನೇ ಇಸವಿಯಲ್ಲಿ ಉಪ್ಪು ತಯಾರು ಮಾಡುವವರು ಸುಂಖ ಕಟ್ಟಿರುವ ಹಾಗೂ ಸ್ಥಳಗಳು ಇವೆ, ತಾಲೂಕಿನ ಸಾಣಿಕೆರೆ, ಗೋಪನಹಳ್ಳಿ ಹಾಗೂ ಮುಮ್ಮಡಿಸಾಗರದಲ್ಲಿ ಉಪ್ಪು ತಯಾರಿಸುವ ಸ್ಥಳಗಳು ಇದ್ದವು ಎಂದರು.ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯೆ ಸುಜಾತ ಪಾಲಯ್ಯ, ತಹಶೀಲ್ದಾರ್ ರೇಹಾನ್ ಪಾಷ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಡಿವೈಎಸ್‌ಪಿ ಬಿಟಿ.ರಾಜಣ್ಣ, ಪಿಎಸ್‌ಐ ಕೆ.ಸತೀಶ್ ನಾಯ್ಕ, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ಕೃಷಿ ಅಧಿಕಾರಿ ಜೆ.ಅಶೋಕ್, ತೋಟಗಾರಿಕೆ ಅಧಿಕಾರಿ ಆರ್.ವಿರುಪಾಕ್ಷಪ್ಪ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಪಶು ಇಲಾಕೆ ಡಾ.ರೇವಣ್ಣ, ಕಂದಾಯ ಅಧಿಕಾರಿ ಲಿಂಗೇಗೌಡ, ವಿಎ.ಪ್ರಕಾಶ್, ಶ್ರೀನಿವಾಸ್, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!