ಚಳ್ಳಕೆರೆ: ಬಯಲು ಸೀಮೆಯಲ್ಲಿ ಹಬ್ಬ ಹರಿದಿನಗಳು ಬಂತೆಂದರೆ ರೈತ ಇನ್ನಷ್ಟು ಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ , ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಗಾದೆಯ ಮಾತಿನಂತೆ ಚಳ್ಳಕೆರೆ ತಾಲೂಕಿನಲ್ಲಿ ಸತತವಾಗಿ ಅತಿವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬಿತ್ತನೆ ಮಾಡಿದ ಬೆಳೆಗಳು ಕೈಸೇರದೆ ಬರ ಪರಿಸ್ಥತಿ ಎದುರಿಸುತ್ತಿರುವ ರೈತರು ಮಾರಿಹಬ್ಬಕ್ಕೆ ಕುರಿಗಳನ್ನು ಖರೀದಿ ಮಾಡುತ್ತಿದ್ದಾರೆ.
ತಾಲೂಕಿನಾದ್ಯಂತ ಮಂಗಳವಾರ ಮತ್ತು ಬುಧವಾರ ನಡೆಯಲಿರುವ ಮಾರಿ ಹಬ್ಬ ಆರಣೆಗಾಗಿ ನಗರದ ನೆಹರು ವೃತ್ತದ ರಾಷ್ಟ್ರೀಯಾ ಹೆದ್ದಾರಿ ಬಳ್ಳಾರಿ ರಸ್ತೆಯಲ್ಲಿ ಸೋಮವಾರ ಕುರಿ.ಮೇಕೆ, ಹಾಗೂ ನಾಟಿ ಕೋಳಿಗಳ ವ್ಯಾಪಾರ ಬಲು ಜೋರಾಗಿ ನಡೆಯಿತು.
ತಾಲೂಕಿನ ಪ್ರಸಿದ್ದ ಶ್ರೀ ಗೌರಮಸಮುದ್ರ ಮಾರಮ್ಮದೇವಿಯ ಜಾತ್ರೆಯ ನಂತರ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಪ್ರತಿ ಮಂಗಳವಾರ ಒಂದೊಂದು ಊರಲ್ಲಿ ಮಾರಿ ಹಬ್ಬವನ್ನು ಭಯ ಭಕ್ತಿಯಿಂದ ಆಚರಣೆ ಮಾಡುವ ಪದ್ದತಿಯನ್ನು ತಲ ತಲಾಂತದಿಂದಲೂ ಆಚರಣೆ ಮಾಡಿಕೊಂಡು ಬರುತ್ತಿದ್ದು.
ಅದೇ ರೀತಿ ನಗರ ಸೇರದಂತೆ ವಿವಿಧ ಗ್ರಾಮಗಳಲ್ಲಿ ಮಂಂಗಳವಾರ ಹಾಗೂ ಬುಧವಾರ ನಡೆಯಲಿರುವ ಮಾರಿ ಹಬ್ಬಕ್ಕೆ ಕುರಿ, ಮೇಕೆ ಹಾಗೂ ನಾಟಿ ಕೋಳಿ ಖರೀದಿ ಮಾಡಲು ಮುಂದಾಗಿದ್ದಾರೆ.
ವಿವಿಧ ಗ್ರಾಮಳಿಂದ ಮಾರಟಕ್ಕೆ ತಂದಿರುವ ಕುರಿ ಮೇಕೆ ಹಾಗೂ ಟಗರುಗಳ ಬೆಲೆ ಕನಿಷ್ಟ 10 ಸಾವಿರ ರೂ ಗಳಿಂದ 40 ಸಾವಿರ ರೂಗಳವರೆಗೆ ಇದ್ದವು. ನೆಷ್ಟರಿಷ್ಟರ ಹಾಗೂ ಗೆಳೆಯರ ಜನಸಂಖ್ಯೆಗನುಸಾರವಾಗಿ ಜನರು ಖರೀದಿ ಮಾಡುತ್ತಾರೆ.
ರೈತರು ಸಾಲ ಸೂಲ ಮಾಡಿ ಶೇಂಗಾ ಬಿತ್ತನೆ ಮಾಡಿದ ಬೆಳೆಗಲು ಮಳೆ ಬಾರದೆ ಒಣಗಲು ಪ್ರಾರಂಭಿಸಿದ್ದರೂ ಸಹ ಮಾರಿ ಹಬ್ಬ ಆಚರಣೆಗೆ ಸಾಲ ಮಾಡಿ ಕುರಿ ಮೇಕೆ ಕೋಳಿ ಖರೀದಿ ಮಾಡಲು ಮುಂದಾಗಿದ್ದಾರೆ.