ಚಳ್ಳಕೆರೆ : ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಪ್ರಯುಕ್ತ ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ನಗರದ ಬನಶ್ರೀ ವೃದ್ಧಾಶ್ರಮದಲ್ಲಿ ಉಪಹಾರದ ವ್ಯವಸ್ಥೆ ಮತ್ತು ಹಣ್ಣನ್ನು ಹಂಚಿ ಹಿರಿಯರಿಂದ ಆಶೀರ್ವಾದವನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ವೃದ್ಧಾಶ್ರಮದ ಮುಖ್ಯಸ್ಥರಾದ ನಿವೃತ್ತ ಶಿಕ್ಷಕಿ ಮಂಜುಳಾ ಮಾತನಾಡಿ, ನಮ್ಮ ಹಿರಿಯರನ್ನು ಕುಟುಂಬದಿAದ ಹೊರ ಹಾಕಿ ಸಂತೋಷದಿAದ ಇರಲು ಸಾಧ್ಯವಿಲ್ಲ ಆದ್ದರಿಂದ ಹೆತ್ತು ಹೊತ್ತು ಸಾಕಿದ ಕೈಗಳನ್ನು ಯಾವತ್ತು ಬೇರೆ ಮಾಡಬಾರದು ಅವರ ಆರೈಕೆಗಳು ಸದಾ ನಮ್ಮ ಮೇಲೆ ಇರಬೇಕು ಎಂದರು.
ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನ ಮಾತನಾಡಿ, ತಂದೆ ತಾಯಿಗಳನ್ನು ದೂರ ಮಾಡುವುದು ಮನುಷ್ಯನ ಗುಣವಲ್ಲ, ಒಂದು ಹೆಣ್ಣು ತನ್ನ ತಾಯಿಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತಾಳೆ ಅದರಂತೆ ತನ್ನ ಅತ್ತೆಯನ್ನು ಅಮ್ಮನತರ ನೋಡಿ ಕೊಂಡರೆ ಈ ಪ್ರಕರಣಗಳು ಕ್ಷೀಣಿಸುತ್ತಾವೆ ಆದ್ದರಿಂದ ಕೂಡ ಕುಟುಂಬ ನಮ್ಮ ಸಾಧನೆಯ ಮೆಟ್ಟಿಲುಗಳಿಗೆ ದಾರಿದೀಪವಾಗುತ್ತಾವೆ ಎಂದರು.
ಇದೇ ಸಂಧರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಬಸವರಾಜ್ ಬಾಬು, ಓಬಳೇಶ್, ದಿವಾಕರ್, ಖಜಾಂಚಿ ಅಜಯ್, ಬೈಯಣ್ಣ ಇನ್ನು ಅನೇಕ ಸ್ನೇಹಿತರು ಪಾಲ್ಗೊಡಿದ್ದರು.

About The Author

Namma Challakere Local News
error: Content is protected !!